ಹುಬ್ಬಳ್ಳಿ: ಕೃಷಿ ಚಟುವಟಿಕೆ ಜೊತೆಗೆ ಬ್ರಾಯ್ಲರ್ ಕೋಳಿ ಸಾಕಣೆಯಲ್ಲೂ ಅಧಿಕ ಲಾಭ ಗಳಿಸಬಹುದು ಎಂದು ಸಾಬೀತುಪಡಿಸಿದ ಧಾರವಾಡ ತಾಲ್ಲೂಕಿನ ಲಕಮಾಪುರ ಗ್ರಾಮದ ರೈತ ಮಾಬುಸಾಬ್ ನದಾಫ ಅವರು ಇತರ ರೈತರಿಗೆ ಮಾದರಿಯಾಗಿದ್ದಾರೆ.

ಕೋಳಿ ಫಾರಂನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಆರಂಭಿಸಿದ ಮಾಬುಸಾಬ್, 15 ವರ್ಷಗಳ ಹಿಂದೆ ಕೋಳಿ ಸಾಕಣೆ ಆರಂಭಿಸಿದರು. ಇದೀಗ ಅವರ ಫಾರಂನಲ್ಲಿ 10 ಸಾವಿರ ಬ್ರಾಯ್ಲರ್ ಕೋಳಿ ಸಾಕಿದ್ದಾರೆ.

‘ಕೋಳಿ ಸಾಕಣೆಯಲ್ಲಿ ಮೊಟ್ಟೆಕೋಳಿ ಮತ್ತು ಮಾಂಸಕೋಳಿ ಎಂಬ ಎರಡು ತಳಿಗಳಿವೆ. ಮಾರುಕಟ್ಟೆ ಅನುಸಾರ ಕೋಳಿ ಮರಿಗಳ ದರ ನಿರ್ಧರಿಸಲಾಗುತ್ತದೆ. ಈ ಬಾರಿ ಬೆಂಗಳೂರು ಮತ್ತು ಹೊಸಪೇಟೆಯಿಂದ ₹45ರಂತೆ 10 ಸಾವಿರ ಕೋಳಿ ಮರಿಗಳನ್ನು ತರಿಸಲಾಗಿದೆ’ ಎಂದು ಮಾಬುಸಾಬ್ ನದಾಫ್ ತಿಳಿಸಿದರು.

‘ಕೋಳಿ ಮರಿಗಳಿಗೆ ಸುಮಾರು 12 ದಿನಗಳವರೆಗೆ ವಿದ್ಯುತ್ ದೀಪಗಳ ಮೂಲಕ ಶಾಖ (ಕಾವು) ನೀಡಲಾಗುತ್ತದೆ. ಒಂದು ಕೋಳಿ 35 ದಿನಕ್ಕೆ ಸುಮಾರು 2.5 ಕೆ.ಜಿ ತೂಕ ಬರುತ್ತದೆ. ಒಂದು ಕೋಳಿಗೆ ಸಾಕಣೆಗೆ ಅಂದಾಜು ₹80ರಷ್ಟು ವೆಚ್ಚ ತಗಲುತ್ತದೆ. ರೋಗ ಹಾಗೂ ತಾಪಮಾನ ವ್ಯತ್ಯಾಸದಿಂದ ಕೋಳಿಗಳು ಸಾಯುವುದನ್ನು ತಡೆಯಲು ವೈದ್ಯಕೀಯ ಉಪಚಾರ (ವ್ಯಾಕ್ಸಿನ್) ನೀಡಲಾಗುತ್ತದೆ. ಇದರಿಂದ ಕೋಳಿಗಳ ಆರೋಗ್ಯ ಹಾಗೂ ಮಾಂಸ ವೃದ್ಧಿಯಾಗುತ್ತದೆ’ ಎಂದು ಅವರು ಹೇಳಿದರು.

‘ಈ ಬಾರಿಯ ಕೋಳಿಗಳ ಆರೋಗ್ಯಯುತವಾಗಿ ಬೆಳೆದಿವೆ. ನಿತ್ಯ ಫೀಡ್ ಹಾಗೂ ಶುದ್ಧ ನೀರು ಒದಗಿಸಲಾಗುತ್ತದೆ. ಸಗಟು ಮಾರುಕಟ್ಟೆಯಲ್ಲಿ ಬ್ರಾಯ್ಲರ್ ಕೋಳಿ ಪ್ರತಿ ಕೆ.ಜಿ ಮಾಂಸಕ್ಕೆ ₹140ರಿಂದ ₹145ರವರೆಗೆ ಇದ್ದು, ಈ ದರ ಮುಂದುವರಿದರೆ ಅಧಿಕ ಲಾಭ ಬರುವ ನಿರೀಕ್ಷೆಯಿದೆ. ಅದರಂತೆ ಸ್ಥಳೀಯ ರೈತರಿಂದ ಕೋಳಿ ಗೊಬ್ಬರಕ್ಕೆ ಅಧಿಕ ಬೇಡಿಕೆಯಿದ್ದು, ಪ್ರತಿ ವರ್ಷ ಬೇಸಿಗೆಯಲ್ಲಿ ಒಂದು ಟ್ರಾಕ್ಟರ್ ಗೊಬ್ಬರವನ್ನು ಅಂದಾಜು ₹3 ಸಾವಿರಕ್ಕೆ ಮಾರಾಟ ಮಾಡಲಾಗುತ್ತದೆ’ ಎಂದು ಮಾಬುಸಾಬ್ ತಿಳಿಸಿದರು.

ರೈತರು ಕೃಷಿ ಜೊತೆಗೆ ಪರ್ಯಾಯವಾಗಿ ಕೋಳಿ ಸಾಕಣೆ, ಹೈನುಗಾರಿಕೆಯಂತಹ ಕೃಷಿಯೇತರ ಚಟುವಟಿಕೆಗಳಲ್ಲೂ ಲಾಭ ಗಳಿಸಬಹುದು ಎಂಬುದಕ್ಕೆ ಮಾಬುಸಾಬ ಮಾದರಿಯಾಗಿದ್ದಾರೆ.

‘ಮನೆಯಲ್ಲೇ ಫೀಡ್ ತಯಾರಿ ಉತ್ತಮ’

‘ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಒಂದು ಕ್ವಿಂಟಲ್ ಪೌಷ್ಟಿಕಾಂಶ ಭರಿತ ಆಹಾರಕ್ಕೆ (ಫೀಡ್) ₹2,000 ದರ ಇದೆ. ಆದರೆ ಸ್ವತಃ ನಾವೇ ತಯಾರಿಸಿದರೆ ಅಂದಾಜು ₹1,600ರವರೆಗೆ ವೆಚ್ಚ ತಗುಲುತ್ತದೆ’ ಎಂದು ಮಾಬುಸಾಬ ತಿಳಿಸಿದರು.

‘ಫೀಡ್ ತಯಾರಿಕೆಗೆ ಸೊಯಾಬಿನ್ ಪೌಡರ್, ಮೆಕ್ಕೆಜೋಳ, ಭತ್ತದ ಸಿಪ್ಪೆ, ಕಾಸ್ಟೆಡ್ ಪೌಡರ್ ಅವಶ್ಯವಿದೆ. ಸ್ಥಳೀಯ ರೈತರು ಬೆಳೆದ ಮೆಕ್ಕೆಜೋಳ ಹಾಗೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಸೊಯಾಬಿನ್, ಕಾಸ್ಟೆಡ್ ಪೌಡರ್ ಖರೀದಿಸುತ್ತೇನೆ. ಎಲ್ಲವನ್ನೂ ಮಿಶ್ರಣ ಮಾಡಿ ಕೋಳಿಗಳಿಗೆ ನೀಡಲಾಗುತ್ತದೆ. ಇದರಿಂದ ಕೋಳಿ ಸಾಕಣೆ ವೆಚ್ಚ ಕಡಿಮೆಯಾಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.