ಧಾರವಾಡ: ‘ಶಿಸ್ತು, ಸಂಯಮ ಮತ್ತು ರಾಷ್ಟ್ರಪ್ರೇಮವುಳ್ಳ ವ್ಯಕ್ತಿಗಳಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯವಿದೆ’ ಆರ್ಎಸ್ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.

ಇಲ್ಲಿನ ರಾಮನಗರದ ಆದರ್ಶ ಬಾಲಿಕಾ ಪ್ರೌಢಶಾಲೆ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಆರ್ಎಸ್ಎಸ್ನ ಶಿವಕೃಪಾ ನೂತನ ಕಾರ್ಯಾಲಯ ಲೋಕಾರ್ಪಣೆಯ ಕಾರ್ಯಕ್ರಮದ ಅವರು ಮಾತನಾಡಿದರು.

‘ರಾಷ್ಟ್ರ ಭಕ್ತಿ ಬೆಳೆಸಿಕೊಳ್ಳಿ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸೇವೆಗೆ ಸಿದ್ಧನಿರಬೇಕು. ಸಂಘಟನಾ ಶಕ್ತಿ ಹೆಚ್ಚಿಸಬೇಕು. ಸಂಘಟಿತ ಸಮಾಜ ರಾಷ್ಟ್ರದ ಆಸ್ತಿ. ಪ್ರತಿಯೊಬ್ಬರೂ ತಮ್ಮ ಪಾಲಿನ ಕರ್ತವ್ಯಗಳನ್ನು ನಿರ್ವಹಿಸಬೇಕು. ಸಾಮಾಜಿಕ ಪರಿವರ್ತನೆಗಾಗಿ ಕೆಲಸ ಮಾಡುವವರಿಗೆ ಶಿವಕೃಪಾ ಕಾರ್ಯಾಲಯ ಶಕ್ತಿಕೇಂದ್ರವಾಗಲಿ’ ಎಂದು ಆಶಿಸಿದರು.

ಅಮ್ಮಿನಭಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಸಂಚಾಲಕ ವೇದವ್ಯಾಸ ದೇಶಪಾಂಡೆ, ಉತ್ತರ ಪ್ರಾಂತ ಪ್ರಚಾರಕ ಬಸವರಾಜ ಡಂಬಳ, ಟ್ರಸ್ಟ್ ಅಧ್ಯಕ್ಷ ಅಮರ ಟಿಕಾರೆ, ವೆಂಕಟೇಶ ಕರಿಕಲ್ಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-24-1190858545

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.