ಧಾರವಾಡ: ‘ನಗರದ ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಏಪ್ರಿಲ್ 17 ಮತ್ತು 18 ರಂದು 15 ನೇ ‘ಇನ್ಸಿಗ್ನಿಯಾ’ ರಾಷ್ಟ್ರಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವ ಜರುಗಲಿದೆ’ ಎಂದು ಪ್ರಾಚಾರ್ಯ ಪ್ರೊ.ರಮೇಶ ಚಕ್ರಸಾಲಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘17 ರಂದು ಬೆಳಿಗ್ಗೆ 9.30ಕ್ಕೆ ಉತ್ಸವ ಆರಂಭವಾಗಲಿದೆ. ಎಸ್ಡಿಎಂಇ ಸೊಸೈಟಿಯ ಕಾರ್ಯದರ್ಶಿ ಜೀವಂಧರಕುಮಾರ ಉದ್ಘಾಟನೆ ನೆರವೇರಿಸುವರು’ ಎಂದರು.

‘ಉತ್ಸವದಲ್ಲಿ ಪ್ರಬಂಧ ಮಂಡನೆ, ರಸಪ್ರಶ್ನೆ ಸೇರಿದಂತೆ 35 ಕ್ಕೂ ಹೆಚ್ಚು ತಾಂತ್ರಿಕ ಕಾರ್ಯಕ್ರಮ. ನೃತ್ಯ, ಸಂಗೀತ, ನಾಟಕ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಆಟೊ ಎಕ್ಸ್ಪೋ, ಎಸ್ಡಿಎಂ ವೈದ್ಯಕೀಯ ವಿಜ್ಞಾನ ಕಾಲೇಜು ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಲಿದೆ’ ಎಂದರು.

‘18 ರಂದು ಸಂಜೆ 7.30ಕ್ಕೆ ಕಾಲೇಜಿನ ಕ್ರೀಡಾ ಮೈದಾನದಲ್ಲಿ ಬಾಲಿವುಡ್ ಹಿನ್ನಲೆ ಗಾಯಕಿ ಹನ್ಸಿಕಾ ಪರಿಖ್ ಅವರಿಂದ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸುವರು. ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ಸಹಿತ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಭಾಗವಹಿಸುವರು’ ಎಂದು ಹೇಳಿದರು.

ಎಸ್ಡಿಎಂಇ ಸೊಸೈಟಿಯ ಕಾರ್ಯದರ್ಶಿ ಜೀವಂಧರಕುಮಾರ, ಡೀನ್ ಪ್ರೊ.ಜೆ.ವಿ.ವಡವಿ, ಪ್ರೊ.ಸತೀಶ ಕೆ.ಎ, ಪ್ರೊ.ಸುನೀಲ ಹೊನ್ನುಂಗರ ಸುದ್ದಿಗೋಷ್ಠಿಯಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-24-1282808435

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.