ಧಾರವಾಡ: ಪ್ರತ್ಯೇಕ ಪಾಲಿಕೆಗಾಗಿ ಹೋರಾಟ ಮುಂದುವರಿದಿದ್ದು, ಹೋರಾಟಗಾರರು ಬಟ್ಟೆಯ ಮೇಲೆ ರಕ್ತದಲ್ಲಿ 'ಮಹಾನಗರ ಪಾಲಿಕೆ ಆಗಲೇಬೇಕು ಧಾರವಾಡ ಜನರ ತಾಳ್ಮೆ ಪರೀಕ್ಷಿಸಬೇಡಿ' ಎಂದು ಬರೆದು ಪ್ರತಿಭಟನೆ ನಡೆಸಿದರು.

ದೀಪಾ ನೀರಲಕಟ್ಟಿ, ಬಸವರಾಜ್ ಜಾಧವ್, ಬಸವರಾಜ ಹೆಬ್ಬಳ್ಳಿ, ಶಿವು ನಿಗದಿ, ಕಿಶೋರ ಬಡಿಗೇರ, ಕಾರ್ತಿಕ್ ನಾಯಕ್ ಅವರು ರಕ್ತ ನೀಡಿದರು.

ಮಹಾನಗರ ಪಾಲಿಕೆ ಆಗಲೇಬೇಕು ಎಂದು ರಕ್ತದಲ್ಲಿ ಬರೆದಿದ್ದೇವೆ, ಈ ಬಟ್ಟೆಯನ್ನು ರಾಜ್ಯಪಾಲರಿಗೆ ಕಳಿಸುತ್ತೇವೆ ಎಂದು ಹೋರಾಟಗಾರರು ಹೇಳಿದರು.

'ನಮ್ಮ ಬೇಡಿಕೆಗೆ ರಾಜ್ಯಪಾಲರು ಸ್ಪಂದಿಸಲಿ ಎಂದು ಪ್ರಾರ್ಥಿಸಿ ವೇದಿಕೆಯಲ್ಲಿ ಲಿಂಗಪೂಜೆ ಮಾಡಿದ್ದೇವೆ` ಎಂದು ಹಿರಿಯ ವಕೀಲ ಬಿ.ಡಿ.ಹಿರೇಮಠ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.