ಧಾರವಾಡ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸುವ ಪ್ರಸ್ತಾವಕ್ಕೆ ರಾಜ್ಯಪಾಲರು ಮಂಗಳವಾರ ಷರತ್ತುಬದ್ಧ ಅನುಮೋದನೆ ನೀಡಿದ್ದಾರೆ.

ಹಾಲಿ ಪಾಲಿಕೆ ಸದಸ್ಯರ ಅವಧಿ ಐದು ವರ್ಷ ಪೂರ್ಣಗೊಂಡ ನಂತರ ವಿಭಜನೆ ಜಾರಿಯಾಗಬೇಕು. 2026 ಜನವರಿ 1ರಿಂದ 2027 ಮಾರ್ಚ್ 31ರವರೆಗೆ ಆಡಳಿತ ಘಟಕಗಳ ಗಡಿ ಬದಲಾಯಿಸಬಾರದು ಎಂಬ ಜನಗಣತಿ ನಿರ್ದೇಶನಾಲಯದ ಸೂಚನೆಯನ್ನು ಪಾಲಿಸಬೇಕು, ಜನಗಣತಿ ಕಾರ್ಯಾಚರಣೆ ಮುಗಿದ ನಂತರ ಅಧಿಸೂಚನೆ ಅನುಷ್ಠಾನಗೊಳಿಸಬೇಕು ಎಂಬ ನಿಬಂಧನೆ ಹಾಕಿದ್ದಾರೆ.

‘ವಿಭಜನೆ ನಂತರದ ಎರಡೂ ಪಾಲಿಕೆಗಳಿಗೆ ಆರ್ಥಿಕ ನೆರವು ಮತ್ತು ಆದಾಯ ಹಂಚಿಕೆಗೆ ರಾಜ್ಯ ಸರ್ಕಾರವು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ. ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ.

ಮುಂದುವರಿದ ಹೋರಾಟ: ಈ ಮಧ್ಯೆ ಇಲ್ಲಿ ಅನಿರ್ದಿಷ್ಟಾವಧಿ ಧರಣಿ ಮುಂದುವರೆದಿದೆ. ಪ್ರತಿಭಟನಕಾರರು ಬಟ್ಟೆಯ ಮೇಲೆ ರಕ್ತದಲ್ಲಿ, ‘ಮಹಾನಗರ ಪಾಲಿಕೆ ಆಗಲೇಬೇಕು’ ಎಂದು ಬರೆದು ಪ್ರತಿಭಟನೆ ನಡೆಸಿದರು.

ಬಿಜೆಪಿ ಬೆಂಬಲ: ಧಾರವಾಡ ಪ್ರತ್ಯೇಕ ಪಾಲಿಕೆ ರಚನೆ ವಿಷಯದಲ್ಲಿ ಆಕ್ಷೇಪಿಸಿದ್ದ ಬಿಜೆಪಿಯವರು ಮಂಗಳವಾರ, ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-51-229123881

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.