ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ಪ್ರಸ್ತಾವಕ್ಕೆ ರಾಜ್ಯಪಾಲರು ಅನುಮೋದನೆ ನೀಡಬೇಕು ಎಂದು ಆಗ್ರಹಿಸಿ ಹೋರಾಟಗಾರರು ಶನಿವಾರ ಪಾಲಿಕೆ ಕಚೇರಿ ಆವರಣದಲ್ಲಿನ ‘ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆವರಣ’ ಫಲಕದ ‘ಹುಬ್ಬಳ್ಳಿ’ ಪದದ ಮೇಲೆ ಕಾಗದ ಅಂಟಿಸಿ ಪ್ರತಿಭಟಿಸಿದರು.

ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆಯವರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಶನಿವಾರ ಒಂಬತ್ತನೇ ದಿನ ಪೂರೈಸಿದೆ. ಫಲಕದ ‘ಹುಬ್ಬಳ್ಳಿ’ ಪದಕ್ಕೆ ಕಾಗದ ಅಂಟಿಸಿ ‘ಎಚ್ಡಿಎಂಸಿ ಸಾಕು, ಡಿಎಂಸಿ ಬೇಕು’ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

‘ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟವು ಜನಾಂದೋಲನವಾಗಿ ರೂಪುಗೊಳ್ಳುತ್ತಿದೆ. ರಾಜ್ಯಪಾಲರು ಕೂಡಲೇ ಪ್ರಸ್ತಾವಕ್ಕೆ ಅನುಮೋದನೆ ನೀಡಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು’ ಎಂದು ಹಿರಿಯ ವಕೀಲ ಬಿ.ಡಿ.ಹಿರೇಮಠ ಎಚ್ಚರಿಸಿದರು.

ಬೆಳಿಗ್ಗೆಯಿಂದ ಸಂಜೆವರೆಗೆ ಉಪವಾಸ: ಬೆಳಿಗ್ಗೆಯಿಂದ ಸಂಜೆಯವರೆಗೆ ಪ್ರತಿಭಟನೆಯಲ್ಲಿ ಶಿವಶಂಕರ ಹಪ್ಪಣ್ಣವರ, ಕಿಶೋರ ಬಡಿಗೇರ, ಶಂಕರ ನೀರಾವರಿ, ಆಸ್ಮಾ ಸೈಯದ್, ಭಾಷಾ ಸಾಬ್ ಉಪವಾಸ ಮಾಡಿದರು.

ಮರಾಠ ಸಮಾಜದ ಮುಖಂಡ ರಾಜು ಬಿರಜನವರ, ಪ್ರಕಾಶ ಘಾಟಗೆ, ರಾಜಶೇಖರ ಕಮತಿ, ಸಂಭಾಜಿರಾವ್ ಗೋಡಸೆ, ವಿನಯ ಬಾಬರ, ನವೀನ ಕದಂ, ಮಹೇಶ ಘಾಟಗೆ, ಅರವಿಂದ ಏಗನಗೌಡರ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-24-206785676

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.