ಧಾರವಾಡ: ವಿವಿಧ ಕಂಪನಿಗಳ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿ ನೆರವಿನೊಂದಿಗೆ ನಗರದ ಕೋರ್ಟ್ ವೃತ್ತದ ಬಳಿ ₹ 50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕ್ರೀಡಾ ಸಂಕೀರ್ಣದ ಉದ್ಘಾಟನಾ ಸಮಾರಂಭ ಶನಿವಾರ ನಡೆಯಲಿದೆ.

ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (ಆರ್ವಿಎನ್ಎಲ್) ಸಂಸ್ಥೆಯು ಕ್ರೀಡಾ ಸಂಕೀರ್ಣವನ್ನು ನಿರ್ಮಿಸಿದ್ದು, ಆರ್ವಿಎನ್ಎಲ್ ಸಂಸ್ಥೆಯು ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್ ಮೂಲಕ ಈಜುಕೊಳ ನಿರ್ಮಿಸಿದೆ.

ಎನ್ಎಂಡಿಸಿ ಮತ್ತು ಒಎನ್ಜಿಸಿ ಸಂಸ್ಥೆಗಳು ಕ್ರೀಡಾಂಗಣಕ್ಕೆ ಸಿಎಸ್ಆರ್ ನಿಧಿ ನೆರವು ಒದಗಿಸಿವೆ. 1.6 ಎಕರೆ ವಿಸ್ತೀರ್ಣದಲ್ಲಿ ಮೂರು ಅಂತಸ್ತಿನ (ಜಿ+3) ಕ್ರೀಡಾಂಗಣ ನಿರ್ಮಿಸಲಾಗಿದೆ. ನವತಂತ್ರಜ್ಞಾನ ಬಳಸಿ ಸ್ಟೀಲ್ ರಚನೆಯೊಂದಿಗೆ ಕಟ್ಟಡ ನಿರ್ಮಿಸಲಾಗಿದೆ. ಗ್ಯಾಲರಿ, ಕ್ರೀಡಾಪಟುಗಳಿಗೆ ಪ್ರತ್ಯೇಕ ಕೊಠಡಿ ಸೌಲಭ್ಯ ಕಲ್ಪಿಸಲಾಗಿದೆ. ಕ್ಯಾಂಟೀನ್, ಕ್ರೀಡಾ ಸಾಮಗ್ರಿ ಮಳಿಗೆ, ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ, ಕಬಡ್ಡಿ ಅಂಕಣ, ಬ್ಯಾಡ್ಮಿಂಟನ್, ಜುಡೋ, ಜಿಮ್ ವ್ಯವಸ್ಥೆ ಇದೆ. ಇದರ ಶಿಲಾನ್ಯಾಸವನ್ನು 2018ರಲ್ಲಿ ನೆರವೇರಿಸಲಾಗಿತ್ತು.

ಈ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಮನ್ಸುಖ್ ಮಾಂಡವಿಯಾ, ಪ್ರಲ್ಹಾದ ಜೋಶಿ ಪಾಲ್ಗೊಳ್ಳುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.