ಹುಬ್ಬಳ್ಳಿ: ‘ಅಹಲ್ಯಾ ಬಾಯಿ ಹೋಳ್ಕರ್ ಜಯಂತಿ ಅಂಗವಾಗಿ ಭಾರತೀಯ ಮಜ್ದೂರ್ ಸಂಘದ ಕರ್ನಾಟಕ ರಾಜ್ಯ ಘಟಕವು ರಾಜ್ಯದ ದುಡಿಯುವ ಮಹಿಳಾ ವರ್ಗದ ಘನತೆ, ರಕ್ಷಣೆ ಮತ್ತು ಪ್ರಗತಿಪರ ಕಲ್ಯಾಣಕ್ಕಾಗಿ ಒಂದು ದಿನದ ರಾಜ್ಯ ಮಹಿಳಾ ಅಧಿವೇಶನವನ್ನು ಧಾರವಾಡ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಮೇ 17ರಂದು ಬೆಳಿಗ್ಗೆ 10ಕ್ಕೆ ಆಯೋಜಿಸಿದೆ’ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಲ್.ವಿಶ್ವನಾಥ್ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಮಧ್ಯಾಹ್ನ 12.30ಕ್ಕೆ ಶೋಭಾಯಾತ್ರೆ ನಡೆಯಲಿದೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅಧಿವೇಶನ ಉದ್ಘಾಟಿಸುವರು’ ಎಂದರು.

‘ಜಿಲ್ಲಾಧಿಕಾರಿ ಸ್ನೇಹಲ್ ಆರ್., ಪಾಲಿಕೆಯ ಮೇಯರ್ ಜ್ಯೋತಿ ಪಾಟೀಲ, ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯ ಸಹ ಕಾರ್ಯವಾಹಿಕಾ ಅಲಕಾ ಇನಾಮದಾರ ಮತ್ತು ಬಿಎಂಎಸ್ನ ಕೇಂದ್ರ ಕಾರ್ಯ ಸಮಿತಿ ಸದಸ್ಯೆ ಭೂಲೋಕೇಶ್ವರಿ, ಬಿಎಂಎಸ್ನ ದಕ್ಷಿಣ ಮತ್ತು ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಲಿದ್ದಾರೆ. ಬಿಎಂಎಸ್ ರಾಜ್ಯ ಘಟಕದ ಅಧ್ಯಕ್ಷ ಎನ್.ಕೆ. ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ತಿಳಿಸಿದರು.

‘ಅಧಿವೇಶನದಲ್ಲಿ ‘ಉದ್ಯೋಗ ಕ್ಷೇತ್ರದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಮತ್ತು ಸವಾಲುಗಳು’ ಕುರಿತು ಸಂವಾದ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 1500ಕ್ಕೂ ಹೆಚ್ಚು ಭಾರತೀಯ ಮಜ್ದೂರ ಸಂಘದೊಂದಿಗೆ ಸಂಯೋಜನೆಗೊಂಡಿರುವ ಯೂನಿಯನ್ಗಳ ಮಹಿಳಾ ಪಧಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ನರೆಂದ್ರ ಜಾಧವ್, ಕೇಂದ್ರ ಅಸಂಘಟಿತ ವಲಯದ ಸಹ ಪ್ರಭಾರ ಸಿ.ಟಿ.ಪಾಟೀಲ್, ವರಿಷ್ಠ ನಾಗರಿಕ ಪರಿಸಂಘದ ಬಾಬುರಾವ್, ರಾಧಾಕೃಷ್ಣನ್, ಗಂಗಾಧರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-24-700281588

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.