ಧಾರವಾಡ: ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಜೂನ್ 30ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪೂರ್ವಸಿದ್ಧತೆ ಮತ್ತು ತರಬೇತಿ ಜೂನ್ 20ರಿಂದ 29ರವರೆಗೆ ನಡೆಯಲಿದೆ. ಜೂನ್ 30ರಿಂದ ಜುಲೈ 29ರವರೆಗೆ ಬಿಎಲ್ಒಗಳು ಮನೆಗಳಿಗೆ ಭೇಟಿ ನೀಡಿ ಅರ್ಜಿ ನೀಡುವರು. ಅರ್ಜಿ ಭರ್ತಿ ಮಾಡಿ ಮೂರು ದಿನಗಳಲ್ಲಿ ಬಿಎಲ್ಒಗೆ ತಲುಪಿಸಬೇಕು. ಜುಲೈ 29ರಂದು ಮತಗಟ್ಟೆ ರ್ಯಾಷನಲೈಸೇಷನ್ ಕಾರ್ಯ ನಡೆಯಲಿದೆ. ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 5ರಂದು ಪ್ರಕಟಿಸಲಾಗುವುದು. ಆಕ್ಷೇಪಣೆಗಳಿದ್ದರೆ ಆಗಸ್ಟ್ 5 ರಿಂದ ಸೆಪ್ಟೆಂಬರ್ 4ರವರೆಗೆ ಸಲ್ಲಿಸಲು ಅವಕಾಶ ಇದೆ. ಸೆ.5 ರಿಂದ ಅ.3 ವರೆಗೆ ನೋಟಿಸ್ ಹಂತದಲ್ಲಿ ಆಕ್ಷೇಪಣೆ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು. ಅ. 7 ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು’ ಎಂದು ವಿವರ ನೀಡಿದರು.

‘2002 ಜ.1ರ ಮತದಾರರ ಪಟ್ಟಿ ಆಧರಿಸಿ ಸಮಗ್ರ ಪರಿಷ್ಕರಣೆ ನಡೆಯಲಿದೆ. ಸಮಗ್ರ ಪರಿಷ್ಕರಣೆ ಕಾರ್ಯ ಹಲವು ಬಾರಿ ನಡೆದಿದೆ. ಈ ಹಿಂದೆ 2002ರಿಂದ 2004 ಅವಧಿಯಲ್ಲಿ ನಡೆದಿದೆ. ಪುನರಾವರ್ತನೆಯಾದವರ, ಮರಣಿಸಿದವರ, ಅನರ್ಹರ ಹೆಸರು ತೆಗೆದುಹಾಕಲು ಈ ವಿಶೇಷ ಪರಿಷ್ಕರಣೆಯಿಂದ ಸಹಾಯವಾಗುತ್ತದೆ’ ಎಂದರು.

2002ರ ಮತದಾರರ ಪಟ್ಟಿಗೆ ತಾಳೆ ಮಾಡುವ ಕಾರ್ಯ: ಎಸ್ಐಆರ್ ಪೂರ್ವ ಸಿದ್ಧತೆ ನಿಟ್ಟಿನಲ್ಲಿ 2025 ಸೆ. 12 ರಿಂದ 2026 ಮೇ 19ವರೆಗೆ ಮತದಾರರ ಪಟ್ಟಿ 2025 ಪಟ್ಟಿಯಲ್ಲಿ ನೋಂದಣಿಯಾದ ಮತದಾರರನ್ನು 2002ರ ಮತದಾರರ ಪಟ್ಟಿಗೆ ತಾಳೆ ಮಾಡುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಮೇ 19ರವರೆಗೆ ಶೇ 89.94 ರಷ್ಟು ಮ್ಯಾಪಿಂಗ್ ಕಾರ್ಯ ಆಗಿದೆ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ ಸುದ್ದಿಗೋಷ್ಠಿಯಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-24-1792914504

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.