ಹುಬ್ಬಳ್ಳಿ: ಗೋವಾದ ಬಾಂಬೋಲಿಯಂ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ ಮೂರನೇ ಮಹಿಳೆಯರ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಧಾರವಾಡ ಜಿಲ್ಲೆಯ ಮಹಿಳಾ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ.

60 ವರ್ಷ ಮೇಲ್ಪಟ್ಟವರ ವಿಭಾಗದ ಜಾವಲಿನ್ ಎಸೆತದಲ್ಲಿ ಧಾರವಾಡದ ಖೈರುನ್ನಿಸಾ ಖಾಜಿ ಚಿನ್ನ, 800 ಮೀ. ಓಟದಲ್ಲಿ ಕಂಚು ಮತ್ತು 1,500 ಮೀ. ಓಟದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

40ಕ್ಕೂ ಹೆಚ್ಚಿನ ವಯೋಮಾನದವರ ವಿಭಾಗದಲ್ಲಿ ಸ್ಪರ್ಧಿಸಿದ್ದ ಹುಬ್ಬಳ್ಳಿಯ ಲಲಿತಾ ಬೆಳವಿ ಅವರು ಶಾಟ್ಪಟ್ ಮತ್ತು ಹ್ಯಾಮರ್ ಎಸೆತದಲ್ಲಿ ಕಂಚು, 55ಕ್ಕೂ ಹೆಚ್ಚಿನ ವಯೋಮಾನದವರ ವಿಭಾಗದ ಜಾವಲಿನ್ ಎಸೆತದಲ್ಲಿ ಹುಬ್ಬಳ್ಳಿಯ ಶಶಿಕಲಾ ನಾಯ್ಡು ಬೆಳ್ಳಿ ಪದಕ ಗೆದ್ದಿದ್ದಾರೆ.

35ವರ್ಷ ಮೇಲ್ಪಟ್ಟವರ ವಿಭಾಗದ 4X400 ರಿಲೇಯಲ್ಲಿ ಹುಬ್ಬಳ್ಳಿಯ ರೇಣುಕಾ ಅಲ್ಲಾಪುರ ಚಿನ್ನದ ಪದಕ

ಜಯಿಸಿದ್ದಾರೆ. ಕ್ರೀಡಾಕೂಟದಲ್ಲಿ ಜಿಲ್ಲೆಯ 14 ಮಹಿಳೆಯರು ಭಾಗವಹಿಸಿದ್ದರು. ಸಾಧಕ ಕ್ರೀಡಾಪಟುಗಳನ್ನು ಧಾರವಾಡ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ವಿ.ಆರ್.ಕಿರೇಸೂರ, ಉಪಾಧ್ಯಕ್ಷ ಡಿ.ಬಿ.ಕೋಟಕರ, ಖಜಾಂಚಿ ಎ.ಎಫ್. ರೇಶ್ಮಿ, ಕಾರ್ಯದರ್ಶಿ ಐ.ಎಸ್. ಪೂಜಾರಿ ಅಭಿನಂದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-24-669601678

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.