ಧಾರವಾಡ: ‘ಮಹಿಳಾ ಮೀಸಲಾತಿ ಮಸೂದೆ ವಿಚಾರದಲ್ಲಿ ಕೆಲ ಗೊಂದಲಗಳಿವೆ. ಕ್ಷೇತ್ರ ಪುನರ್ ವಿಂಗಡಣೆ, ಸ್ಥಾನಗಳ ಸಂಖ್ಯೆ ಹೆಚ್ಚಳ, ಜನಗಣತಿ ಪರಿಗಣನೆ (ಹೊಸದೋ, ಹಳೆಯದೋ?) ಮೊದಲಾದವುಗಳ ಕುರಿತು ಸ್ಪಷ್ಟತೆ ಬೇಕು‘ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕ್ಷೇತ್ರವಿಂಗಡಣೆಯನ್ನು ಜನಸಂಖ್ಯೆ ಆಧರಿಸಿ ಮಾಡಲಾಗುತ್ತದೋ?, ಭೌಗೋಳಿಕ ಪ್ರದೇಶ ಆಧರಿಸಿ ಮಾಡುತ್ತಾರೋ? ಎಂಬುದನ್ನು ಸ್ಪಷ್ಟಪಡಿಸಬೇಕು. ಮಹಿಳಾ ಮೀಸಲಾತಿ ಮಸೂದೆಯನ್ನು ಸ್ವಾಗತಿಸುತ್ತೇವೆ. ಹಿಂದೆ ಯುಪಿಎ ಅವಧಿಯಲ್ಲಿಯೇ ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ಗೆ ರಾಜ್ಯಸಭೆಯಲ್ಲಿ ಬಹುಮತ ಇರಲಿಲ್ಲ’ ಎಂದರು.

‘ಮೋದಿ ಪ್ರಧಾನಿಯಾಗಿ 12 ವರ್ಷವಾದರೂ ಮಸೂದೆ ಅಂಗೀಕರಿಸಿ ಅನುಷ್ಠಾನಗೊಳಿಸಿಲ್ಲ. ಮಹಿಳಾ ಮಸೂದೆಯನ್ನು ಜಾರಿಗೊಳಿಸುವುದಾಗಿ ಕಳೆದ ಚುನಾವಣೆ ವೇಳೆ ಹೇಳಿದ್ದರು. ಈಗ ಮಸೂದೆ ವಿಚಾರ ಪ್ರಸ್ತಾಪಿಸಿರುವುದು ಒಳ್ಳೆಯದು,. ಚರ್ಚೆ ನಡೆದ ನಂತರ ಮಾಹಿತಿ ಲಭಿಸಲಿದೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-24-2043495938

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.