ಸೋಮವಾರ, ಡಿಸೆಂಬರ್ 9, 2019
26 °C

ಡೀಸೆಲ್‌ ಲೊಕೊ ಶೆಡ್‌ಗೆ ಐಎಂಎಸ್‌ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ಗದಗ ರಸ್ತೆಯಲ್ಲಿರುವ ಡೀಸೆಲ್‌ ಲೊಕೊ ಶೆಡ್‌ಗೆ ಐಎಂಎಸ್‌ (ಸಮಗ್ರ ನಿರ್ವಹಣಾ ವ್ಯವಸ್ಥೆ) ಮತ್ತು 5 ಎಸ್‌ ಪ್ರಮಾಣೀಕರಣ ಲಭಿಸಿದೆ.

75 ಎಕರೆ ಜಾಗದಲ್ಲಿರುವ ಈ ಶೆಡ್‌ನಲ್ಲಿ 600ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಡಿಸೇಲ್‌ ಆಧಾರಿತ ಎಂಜಿನ್‌ಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಗುಣಮಟ್ಟ, ಪರಿಸರ ನಿರ್ವಹಣೆ ಮತ್ತು ಸುರಕ್ಷತೆಗೆ ಒತ್ತು ಕೊಟ್ಟಿದ್ದರಿಂದ ಈ ಗೌರವ ಸಿಕ್ಕಿದೆ.

ಮಂಗಳವಾರ ನಡೆದ ಕಿರು ಸಮಾರಂಭದಲ್ಲಿ ನೈರುತ್ಯ ರೈಲ್ವೆಯಿಂದ ಮಾನ್ಯತೆ ಪಡೆದ ಎಜೆನ್ಸಿಯ ಅಧಿಕಾರಿ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್ ಅವರಿಗೆ ಈ ಕುರಿತು ಪ್ರಮಾಣಪತ್ರ ನೀಡಿದರು. ಇದೇ ವೇಳೆ ಸಿಂಗ್‌ ಅವರು ಡಿಸೇಲ್‌ ಶೆಡ್‌ನ ತಪಾಸಣೆ ನಡೆಸಿ ನವೀಕರಿಸಲಾದ ಸಿಬ್ಬಂದಿ ಕ್ಯಾಂಟೀನ್ ಮತ್ತು ಕೊಠಡಿ ಉದ್ಘಾಟಿಸಿದರು.

ಅಂಗವಿಕಲರ ದಿನಾಚರಣೆ
ಹುಬ್ಬಳ್ಳಿ:
ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗೀಯ ಕಚೇರಿ ವತಿಯಿಂದ ಮಂಗಳವಾರ ಇಲ್ಲಿನ ರೈಲು ನಿಲ್ದಾಣದಲ್ಲಿ ವಿಶ್ವ ಅಂಗವಿಕಲರ ದಿನ ಆಚರಿಸಲಾಯಿತು.

ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕ ಕೆ. ಸುರೇಶ ಬಾಬು ‘ಅಂಗವಿಕಲರಲ್ಲಿ ನಾಯಕತ್ವದ ಗುಣ ಬೆಳೆಸುವುದು ಈ ಬಾರಿಯ ಅಂಗವಿಕಲರ ದಿನದ ಧ್ಯೇಯವಾಕ್ಯವಾಗಿವೆ. ಅಂಗವಿಕಲರು ಕೀಳರಿಮೆಯಿಂದ ಹೊರಬಂದು ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು’ ಎಂದು ಕರೆ ನೀಡಿದರು.

ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕ ಸಿ.ಎಂ. ರವಿ ಮಾತನಾಡಿ ‘ಅಂಗವಿಕಲರನ್ನು ಗೌರವದಿಂದ, ಘನತೆಯಿಂದ ಮತ್ತು ಸಮಾನತೆಯಿಂದ ನಡೆಸಿಕೊಳ್ಳಬೇಕು. ಅವರ ಹಕ್ಕುಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು, ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು