ಅಹಮದಾಬಾದ್‌ಗೆ ನೇರ ವಿಮಾನ 4ರಿಂದ
ಹುಬ್ಬಳ್ಳಿ: ಕೋವಿಡ್ ಕಾರಣಕ್ಕೆ ರದ್ದಾಗಿದ್ದ ಹುಬ್ಬಳ್ಳಿ–ಅಹಮದಾಬಾದ್ ಇಂಡಿಗೊ ನೇರ ವಿಮಾನ ಸೌಲಭ್ಯ ಜ. 4ರಿಂದ ಪುನರಾರಂಭವಾಗಲಿದೆ. ಈ ವಿಮಾನ ವಾರದಲ್ಲಿ ಮೂರು ದಿನ (ಸೋಮವಾರ, ಬುಧವಾರ ಮತ್ತು ಶುಕ್ರವಾರ) ಎರಡೂ ಮಾರ್ಗದಿಂದ ಸಂಚರಿಸಲಿದೆ.
ಅಹಮದಾಬಾದ್‌ನಿಂದ ಮಧ್ಯಾಹ್ನ 3.15ಕ್ಕೆ ಹೊರಟು ಇಲ್ಲಿಗೆ ಸಂಜೆ 5.15ಕ್ಕೆ ಬರಲಿದ್ದು, ಸಂಜೆ 5.45ಕ್ಕೆ ಇಲ್ಲಿಂದ ಹೊರಟು ರಾತ್ರಿ 7.25ಕ್ಕೆ ಅಹಮದಾಬಾದ್ ತಲುಪಲಿದೆ.
11ರಿಂದ ತಿರುಪತಿಗೆ ವಿಮಾನ: ಹುಬ್ಬಳ್ಳಿ–ತಿರುಪತಿ ನಡುವೆ ಜ. 11ರಿಂದ ವಾರದಲ್ಲಿ ನಾಲ್ಕು ದಿನ (ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರ) ಸ್ಟಾರ್ ಏರ್ ಸಂಸ್ಥೆಯ ವಿಮಾನ ಸೌಲಭ್ಯ ಆರಂಭವಾಗಲಿದೆ. ಬೆಳಿಗ್ಗೆ 11 ಗಂಟೆಗೆ ತಿರುಪತಿಯಿಂದ ಹೊರಡುವ ವಿಮಾನ ಮಧ್ಯಾಹ್ನ 12.30ಕ್ಕೆ ಇಲ್ಲಿಗೆ ಬರಲಿದೆ. ಇಲ್ಲಿಂದ ಮ. 12.55ಕ್ಕೆ ಹೊರಟು 2 ಗಂಟೆಗೆ ತಿರುಪತಿ ತಲುಪಲಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.