ಸರ್ಕಾರ ನಿಗದಿಪಡಿಸಿರುವ ದರಕ್ಕೆ ರೈತರಿಗೆ ಬಿತ್ತನೆ ಬೀಜ ರಸಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ಮಾರಾಟ ಮಾಡಬೇಕು. ಕಡ್ಡಾಯವಾಗಿ ರಸೀದಿ ನೀಡಬೇಕು. ನಿಯಮ ಉಲ್ಲಂಘಿಸಿದರೆ ಕ್ರಮಗೊಳ್ಳಲಾಗುವುದು. ರೈತರು ಖರೀದಿ ಬಿಲ್‌ನ್ನು ಇಟ್ಟುಕೊಂಡಿರಬೇಕು.
ಮಂಜುನಾಥ ಅಂತರವಳ್ಳಿ ಜಂಟಿ ನಿರ್ದೇಶಕ ಕೃಷಿ ಇಲಾಖೆ ಧಾರವಾಡ
ವಾಡಿಕೆಯಂತೆ ಮುಂಗಾರು ಮಳೆಯಾಗಲಿದ್ದು ರೈತರು ಹೊಲ ಹದಮಾಡಿಕೊಂಡು ಬಿತ್ತನೆ ಬೀಜ ರಸಗೊಬ್ಬರ ಸಂಗ್ರಹ ಇಟ್ಟುಕೊಳ್ಳಬೇಕು. ಮಿಶ್ರ ಬೆಳೆ ಬೆಳೆಯುವುದರಿಂದ ಬೆಳೆಹಾನಿ ಪ್ರಮಾಣದ ನಷ್ಟವನ್ನು ಸರಿದೂಗಿಸಬಹುದು.
ರವಿ ಪಾಟೀಲ ಕೃಷಿ ಹವಾಮಾನ ತಜ್ಞ ಧಾರವಾಡ ಕೃಷಿ ವಿಶ್ವವಿದ್ಯಾಲಯ