ಲಿಂಗಾಯತ ಧರ್ಮ ಪ್ರಚಾರ ವೇಳೆ ವೈಯಕ್ತಿಕ ಆಚರಣೆಗೆ ಅಡ್ಡಿಪಡಿಸಬೇಡಿ:ಬಸವರಾಜ ಹೊರಟ್ಟಿ

7
‘ಲಿಂಗಾಯತ ಹೋರಾಟ: ಪ್ರಶ್ನೆ ಪರಿಹಾರ’ ಕೈಪಿಡಿ ಬಿಡುಗಡೆ: ಸಾಮಾನ್ಯವಾಗಿ ಕೇಳುವ 60 ಪ್ರಶ್ನೆಗಳಿಗೆ ಉತ್ತರ

ಲಿಂಗಾಯತ ಧರ್ಮ ಪ್ರಚಾರ ವೇಳೆ ವೈಯಕ್ತಿಕ ಆಚರಣೆಗೆ ಅಡ್ಡಿಪಡಿಸಬೇಡಿ:ಬಸವರಾಜ ಹೊರಟ್ಟಿ

Published:
Updated:
Deccan Herald

ಹುಬ್ಬಳ್ಳಿ: ‘ಲಿಂಗಾಯತ ಧರ್ಮದ ಬಗ್ಗೆ ಪ್ರಚಾರ ಮಾಡುವಾಗ, ತಿಳಿವಳಿಕೆ ನೀಡುವಾಗ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿರುವ ಜನರ ವೈಯಕ್ತಿಕ ಆಚಾರ ವಿಚಾರಗಳಿಗೆ ಅಡ್ಡಿಪಡಿಸಬಾರದು’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಹೊರಟ್ಟಿ ಸಲಹೆ ನೀಡಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಧಾರವಾಡ ಜಿಲ್ಲಾ ಘಟಕ ಹಾಗೂ ರಾಷ್ಟ್ರೀಯ ಬಸವ ಸೇನೆ ಹಾಗೂ ವಿವಿಧ ಬಸವ ಸಂಘಟನೆಗಳ ಸಹಯೋಗದೊಂದಿಗೆ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಲಿಂಗಾಯತ ಹೋರಾಟ: ಪ್ರಶ್ನೆ ಪರಿಹಾರ’ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದರು.

‘ತಾಳಿ ಕಟ್ಟಿಕೊಳ್ಳುವುದು, ಹಣೆಗೆ ಕುಂಕುಮ ಹಚ್ಚುವುದು ಆಚರಣೆಯಾಗಿದೆ. ಅದನ್ನು ತೆಗೆಯಿರಿ ಎಂದು ಯಾರಿಗಾದರೂ ಒತ್ತಡ ಹೇರಿದರೆ, ಅವರು ಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ. ಸತ್ಯ ಕಟುವಾಗಿರುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದೇವಸ್ಥಾನಕ್ಕೆ ಹೋಗಬೇಡಿ ಎನ್ನುವ ಅವಶ್ಯಕತೆ ಇಲ್ಲ, ಅವರಾಗೇ ಬಿಟ್ಟರೆ ಅಡ್ಡಿಯಿಲ್ಲ. ನಾವು ಸ್ವಲ್ಪ ಮೃದುವಾಗಿರಬೇಕು (ಫ್ಲೆಕ್ಸಿಬಲ್), ಬಸವ ತತ್ವವೂ ನಡೆಯಬೇಕು ಹಾಗೂ ಅವರ ಮನಪರಿವರ್ತನೆಯೂ ಆಗಬೇಕು. ಇಂದಿನ ಮಕ್ಕಳು, ಯುವಕರು ವಿಷಯಗಳನ್ನು ಓದಿ ತಿಳಿದುಕೊಂಡು ನಂತರ ಬದಲಾಗುತ್ತಾರೆ’ ಎಂದರು.

‘ಈ ಹೋರಾಟ ಆರಂಭವಾದ ನಂತರ ನಿಧಾನವಾಗಿ ಬದಲಾವಣೆ ಬರುತ್ತಿದೆ. ಸ್ವಾಮೀಜಿಗಳು ಸೇರಿದಂತೆ ಎಲ್ಲರೂ ಕಾರ್ಯಕ್ರಮಗಳಲ್ಲಿ ಸಾಲಾಗಿ ಕುಳಿತುಕೊಳ್ಳುವುದನ್ನು ನೋಡಬಹುದು. ಕೆಲವರು ಅಲ್ಲೂ ಇರುತ್ತಾರೆ, ಇಲ್ಲೂ ಇರುತ್ತಾರೆ. ಶತ್ರುವಿನ ಶತ್ರು ಮಿತ್ರ ಎಂಬಂತೆ ವಿರಕ್ತರು– ಪಂಚಾಚಾರ್ಯರು ಒಂದಾಗಿದ್ದಾರೆ. ಆದರೆ, ನಾನು ಮಾತ್ರ ಒಳಪಂಗಡದ ಯಾವ ಕಾರ್ಯಕ್ರಮಕ್ಕೂ ಹೋಗುವುದಿಲ್ಲ. ಜನರು ಒಳಪಂಗಡವನ್ನು ಬಿಟ್ಟು ನಿಧಾನವಾಗಿ ಒಂದಾಗುತ್ತಿದ್ದಾರೆ. ನಾವೊಬ್ಬರೇ ಪ್ರಗತಿ ಕಂಡರೆ ಸಾಲದು, ಸಮಾಜದ ಹಿಂದುಳಿದವರನ್ನು ಸಹ ಮೇಲಕ್ಕೆ ಎತ್ತಲು ಪ್ರಯತ್ನಿಸಬೇಕು’ ಎಂದು ಹೇಳಿದರು. 

ಸಾಹಿತಿ ವೀರಣ್ಣ ರಾಜೂರ, ಮಹಾಸಭಾದ ಧಾರವಾಡ ಘಟಕದ ಅಧ್ಯಕ್ಷ ಎಂ.ವಿ. ಗೊಂಗಡ ಶೆಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !