ಮತದಾನದ ಮೌನಾವಧಿಗೆ ಆಯೋಗದ ನಿರ್ದೇಶನಗಳು

ಭಾನುವಾರ, ಮೇ 26, 2019
27 °C

ಮತದಾನದ ಮೌನಾವಧಿಗೆ ಆಯೋಗದ ನಿರ್ದೇಶನಗಳು

Published:
Updated:

ಧಾರವಾಡ: ಮತದಾನದಕ್ಕೂ ಪೂರ್ವದಲ್ಲಿ 48 ಗಂಟೆಗಳ ಮೌನಾವಧಿಯಲ್ಲಿ ಮುದ್ರಣ, ಟಿವಿ, ರೇಡಿಯೋ, ಕೇಬಲ್, ಸಾಮಾಜಿಕ ಜಾಲತಾಣಗಳು ಪಾಲಿಸಬೇಕಾದ ವಿಷಯಗಳ ಕುರಿತು ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಮಾರ್ಗದರ್ಶಿ ಸೂತ್ರಗಳನ್ನು ಸೂಚಿಸಿದೆ. ಇದನ್ನು ಕಡ್ಡಾಯವಾಗಿ ಪಾಲಿಸಲು ಎಲ್ಲಾ ರಾಜಕೀಯ ಪಕ್ಷಗಳಿಗೆ, ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ರಜ್ಯ ಮುಖ್ಯ ಚುನಾವಣಾಧಿಕಾರಿ ನಿರ್ದೇಶನ ನೀಡಿದ್ದಾರೆ.

ರಾಜ್ಯದಲ್ಲಿ ಏ. 22, 23ರಂದು ಪ್ರಕಟಿಸಲಾಗುವ ರಾಜಕೀಯ ಜಾಹೀರಾತುಗಳು ರಾಜ್ಯ ಅಥವಾ ಜಿಲ್ಲಾ ಎಂಸಿಎಂಸಿ ಸಮಿತಿಯಿಂದ ಪೂರ್ವ ಪ್ರಮಾಣೀಕೃತವಾಗಿರಬೇಕಾದ್ದು ಕಡ್ಡಾಯ. ಈ ಅವಧಿಯಲ್ಲಿ ಜಾಹೀರಾತು ಪ್ರಕಟಿಸಬಯಸುವ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಪೂರ್ವ ಪ್ರಮಾಣೀಕರಣಕ್ಕೆ ಏ. 20ರೊಳಗೆ ಎರಡು ಸ್ವಯಂ ದೃಢೀಕೃತ ಪ್ರತಿಗಳೊಂದಿಗೆ ಅರ್ಜಿ ನಮೂನೆ ಸಿ ಭರ್ತಿ ಮಾಡಿ ಎಂಸಿಎಂಸಿ ಸಮಿತಿಗೆ ನೀಡಬೇಕು. 

‘ಈ 48 ಗಂಟೆಗಳ ಅವಧಿಯಲ್ಲಿ ಯಾವುದೇ ಮಾಧ್ಯಮಗಳಲ್ಲಿ ಮತದಾರರ ಮೇಲೆ ಪ್ರಭಾವ ಭೀರುವಂತ ಸಂಗತಿಗಳಾದ ಪ್ಯಾನಲ್ ವ್ಯಕ್ತಿಗಳಿಂದ ವಿಚಾರ, ಮನವಿ, ಚರ್ಚೆಗಳು, ವಿಶ್ಲೇಷಣೆ, ಮತದಾರರ ಸಮೀಕ್ಷೆ ಫಲಿಂತಾಂಶಗಳು, ಸಂಬಂಧಿತ ದೃಶ್ಯಾವಳಿ ಹಾಗೂ ಧ್ವನಿ ಸೇರಿದಂತೆ ಚುನಾವಣೆಗೆ ಸಂಬಂಧಿತ ವಿಷಯಗಳ ಪ್ರಸಾರ ಮಾಡದಿರಲು ತಿಳಿಸಲಾಗಿದೆ. ಇದನ್ನು ಉಲ್ಲಂಘಿಸುವವರಿಗೆ ದಂಡ ಹಾಗೂ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ’ ಎಂದು ಚುನಾವಣಾಧಿಕಾರಿ ಹೇಳಿದ್ದಾರೆ.

‘ಲೋಕಸಭೆ ಚುನಾವಣೆಗಳ ಮತದಾನೋತ್ತರ ಸಮೀಕ್ಷೆ ಫಲಿಂತಾಶವನ್ನು ಮುದ್ರಣ ಅಥವಾ ವಿದ್ಯನ್ಮಾನ ಸೇರಿದಂತೆ ಯಾವುದೇ ಮಾಧ್ಯಮಗಳು ಮೇ 19ರ ಸಂಜೆ 6.30ರವರೆಗೆ ಪ್ರಕಟಿಸುವುದನ್ನು ಕೇಂದ್ರ ಚುಣಾವಣಾ ಆಯೋಗ ಸಂಪೂರ್ಣವಾಗಿ ನಿಷೇಧಿಸಿದೆ.
ರಾಜ್ಯದಲ್ಲಿ ಮತದಾನ ಸಂಬಂಧಿತ 48 ಗಂಟೆಗಳ ಮೌನಾವಧಿಯಲ್ಲಿ ಮತದಾನದ ಪ್ರದೇಶಗಳ ಮತದಾರರನ್ನು ಪ್ರಭಾವಿಸುವ, ರಾಜಕೀಯ ಪಕ್ಷಗಳ ಅಥವಾ ಅಭ್ಯರ್ಥಿಗಳ ಪರವಾಗಿ ಪ್ರತ್ಯಕ್ಷ ಅಥವಾ ಅಪ್ರತ್ಯಕ್ಷವಾಗಿ ಬೆಂಬಲ ಕೋರುವ ಕುರಿತ ಸುದ್ದಿ ಹಾಗೂ ರಾಜಕೀಯ ವ್ಯಕ್ತಿಗಳು, ತಾರಾ ಪ್ರಚಾರಕರು ಚುನಾವಣೆ ಸಂಬಂಧಿತ ಪತ್ರಿಕಾಗೋಷ್ಠಿ, ಸಂದರ್ಶನಗಳನ್ನು ನಡೆಸದಂತೆ ಚುನಾವಣಾ ಆಯೋಗ ನಿರ್ಭಂಧಿಸಿದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !