ಕುಂದಗೋಳ ಉಪ ಚುನಾವಣೆ: ಮಸ್ಟರಿಂಗ್ ಕೇಂದ್ರದಲ್ಲಿ ಊಟ ಸಿಗದೆ ಸಿಬ್ಬಂದಿ ಪ್ರತಿಭಟನೆ

ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆ ಮಸ್ಟರಿಂಗ್ ಕೇಂದ್ರದಲ್ಲಿ ಮಧ್ಯಾಹ್ನದ ಊಟ ಖಾಲಿಯಾದ ಕಾರಣ ಕೆಲ ಸಿಬ್ಬಂದಿ ಪ್ರತಿಭಟನೆ ನಡೆಸಿದರು.
ಕೂಡಲೇ ಮಧ್ಯಪ್ರವೇಶಿಸಿದ ಚುನಾವಣಾಧಿಕಾರಿ ಪ್ರಸನ್ನ, ಮತ್ತೆ ಅನ್ನ ಮಾಡಿ ಬಡಿಸುವಂತೆ ಸೂಚನೆ ನೀಡಿದರು.
ಅನ್ನ ಖಾಲಿಯಾದ ಕಾರಣ ಸಮಸ್ಯೆಯಾಗಿತ್ತು, ಕೆಲವೇ ನಿಮಿಷಗಳಲ್ಲಿ ಅನ್ನ ಮಾಡಿ ಬಡಿಸಲಾಯಿತು. ಊಟಕ್ಕಾಗಿ ಸಿಬ್ಬಂದಿಯಿಂದ 150 ಕಡಿತ ಮಾಡಲು ನಿರ್ಧರಿಸಲಾಗಿತ್ತು. ಆದರೆ ಹಣ ಕಡಿತ ಮಾಡದಿರಲು ನಿರ್ಧರಿಸಲಾಗಿದೆ ಎಂದು ಪ್ರಸನ್ನ ತಿಳಿಸಿದರು.
ಅನ್ನ- ಸಾರು, ಬದನೆಕಾಯಿ ಪಲ್ಯ, ಮಜ್ಜಿಗೆ ಹಾಗೂ ಬಾಟಲಿ ನೀರನ್ನು ನೀಡಿದ್ದರು. ಊಟ ಚೆನ್ನಾಗಿತ್ತು, ಆದರೆ ಅನ್ನ ಖಾಲಿಯಾದ ಕಾರಣ ಗೊಂದಲವಾಯಿತು. ಕುಳಿತುಕೊಂಡು ಊಟ ಮಾಡಲು ವ್ಯವಸ್ಥೆ ಮಾಡಿದ್ದರೆ ಚೆನ್ನಾಗಿತ್ತು ಎಂದು ಸಿಬ್ಬಂದಿ ತಿಳಿಸಿದರು.
ಒಟ್ಟು ಎರಡು ಸಾವಿರ ಮಂದಿಗೆ ಅಡುಗೆ ಮಾಡಿಸಲಾಗಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.