ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಿಗೇರಿ: ವಿದ್ಯುತ್ ತಂತಿ ಕಳವು ಪ್ರಕರಣ: 11 ಮಂದಿ ಬಂಧನ

Last Updated 25 ಜನವರಿ 2023, 7:48 IST
ಅಕ್ಷರ ಗಾತ್ರ

ಅಣ್ಣಿಗೇರಿ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಳವಡಿಸಿದ್ದ ವಿದ್ಯುತ್ ತಂತಿ ಹಾಗೂ ರಾಬಿಟ್ ಕಂಡಕ್ಟರ್ ಸೇರಿದಂತೆ ಸುಮಾರು ₹5 ಲಕ್ಷಕ್ಕೂ ಹೆಚ್ಚಿನ ಮೊತ್ತದ ಸಾಮಗ್ರಿಗಳನ್ನು ಕದ್ದು ಪರಾರಿಯಾಗಿದ್ದ 11 ಜನರನ್ನು ಪತ್ತೆ ಹಚ್ಚುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನಾದ್ಯಂತ ವಿದ್ಯುತ್ ತಂತಿಯ ಕಳ್ಳತನವಾಗುತ್ತಿದೆ ಎಂದು
ಸ್ಥಳೀಯ ಹೆಸ್ಕಾಂ ಕಚೇರಿ ಶಾಖಾಧಿಕಾರಿಗಳಾದ ಎನ್.ಸಂಧ್ಯಾರಾಣಿ ಹಾಗೂ ಸುರೇಶ ಉಳ್ಳಾಗಡ್ಡಿ ಅವರು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಿದ್ದಂತಯೇ ಠಾಣಾಧಿಕಾರಿ ಸಿದ್ಧಾರೂಢ ಆಲದಕಟ್ಟಿ ಹಾಗೂ ಸಿಬ್ಬಂದಿ ವರ್ಗ ಎಚ್ಚೆ
ತ್ತುಕೊಂಡು ವಿದ್ಯುತ್ ತಂತಿ ಕಳ್ಳರನ್ನು ಕದ್ದ ಸಾಮಗ್ರಿಗಳ ಸಮೇತ ಪತ್ತೆ ಹಚ್ಚಿದ್ದಾರೆ.

ಆರೋಪಿಗಳಾದ ಮಾರುತಿ ಬಸಪ್ಪ ಹರಣಶಿಕಾರಿ, ಇಮಾಮಸಾಬ ಅಲಿಯಾಸ್‌ ಬುಡ್ಯಾ ದಾವಲಸಾಬ ಸುಂಕದ,
ಮುಸ್ತಾಕಅಹ್ಮದ ಅಗಸಿಬಾಗಿಲ, ಪೀರಸಾಬ ಕೋಲಕಾರ, ಶಬೀಬಸುರಪೂರ, ಶರೀಫ ಭದ್ರಾಪುರ, ವಿರುಪಾ
ಕ್ಷಪ್ಪ ನಲವಡಿ, ಮಹಮ್ಮದರಫೀಕ ಹಳ್ಳಿಕೇರಿ, ಚಂದ್ರಶೇಖರ ಕೊಗ್ಗಿ, ಶ್ರೀಕಾಂತ ಅಬ್ಬಿಗೇರಿ, ಮಂಜುನಾಥ ನಲವಡಿ ಅವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪಿಎಸ್ಐ ಸಿದ್ಧಾರೂಢ ಆಲದಕಟ್ಟಿ ಕಾರ್ಯಾಚರಣೆ ತಂಡದ ನೇತೃತ್ವ ವಹಿಸಿದ್ದರು.

ಆನ್‌ಲೈನ್‌ನಲ್ಲಿ

₹2.85 ಲಕ್ಷ ವಂಚನೆ

ಹುಬ್ಬಳ್ಳಿ: ಯೂಟ್ಯೂಬ್‌ ಚಾನೆಲ್‌ ಸಬ್‌ಸ್ಕ್ರೈಬ್‌ ಮಾಡಿ, ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಬರುತ್ತದೆ ಎಂದು ಧಾರವಾಡದ ಅಕ್ಷತಾ ನಾಯ್ಕ ಅವರನ್ನು ನಂಬಿಸಿದ ವ್ಯಕ್ತಿ, ಅವರಿಂದ ₹2.85 ಲಕ್ಷ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾನೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ಷತಾ ಅವರ ವಾಟ್ಸ್‌ಆ್ಯಪ್‌ ಮತ್ತುಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸಂಪರ್ಕಿಸಿದ ವಂಚಕ, ಒಂದು ಯೂಟ್ಯೂಬ್‌ ಚಾನೆಲ್‌ ಸಬ್‌ಸ್ಕ್ರೈಬ್‌ ಮಾಡಿದರೆ ₹50 ದೊರೆಯುತ್ತದೆ ಎಂದು, 18 ಚಾನೆಲ್‌ ಸಬ್‌ಸ್ಕ್ರೈಬ್‌ ಮಾಡಿಸಿ ₹750 ಅವರ ಖಾತೆಗೆ ಜಮಾ ಮಾಡಿದ್ದಾನೆ. ನಂತರ ಅವರಿಂದ ₹2 ಸಾವಿರ ಹೂಡಿಕೆ ಮಾಡಿಸಿಕೊಂಡು ₹2,800 ಜಮಾ ಮಾಡಿದ್ದಾನೆ. ಲಾಭದ ಆಮಿಷ ತೋರಿಸಿ ಮತ್ತಷ್ಟು ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT