2025ರ ಡಿಸೆಂಬರ್ ಅಂತ್ಯದೊಳಗೆ ಕರ್ನಾಟಕದಲ್ಲಿ 1 ಲಕ್ಷ ಹುಬ್ಬಳ್ಳಿ ನಗರದಲ್ಲಿ 500 ಹನುಮಾನ್ ಚಾಲೀಸಾ ಕೇಂದ್ರಗಳನ್ನು ಸ್ಥಾಪಿಸಬೇಕು
ಪ್ರವೀಣ ತೊಗಾಡಿಯಾ ಸಂಸ್ಥಾಪಕ ಅಧ್ಯಕ್ಷ ಅಂತರರಾಷ್ಟ್ರೀಯ ಹಿಂದೂ ಪರಿಷತ್
ಕಾರ್ಯಕರ್ತರ ಜೊತೆ ಸಂವಾದ
ಹಿಂದೂ ಕಾರ್ಯಕರ್ತರ ಜತೆ ಸಂವಾದ ನಡೆಸಿದ ತೊಗಾಡಿಯಾ ‘ಧರ್ಮದಲ್ಲಿ ಶ್ರದ್ಧೆಯಿದ್ದಾಗ ನನ್ನದು ಎನ್ನುವ ಪ್ರೀತಿ ಇರುತ್ತದೆ. ಮತಾಂತರ ತಡೆಗೆ ಹಿಂದೂಗಳಲ್ಲಿ ಧರ್ಮಶ್ರದ್ಧೆ ಹೆಚ್ಚಿಸಬೇಕಿದೆ’ ಎಂದರು. ‘ಮತಾಂತರಕ್ಕೆ ಬಡತನ ಕಾರಣ ಎನ್ನುತ್ತಾರೆ. ಮುಸ್ಲಿಮರಲ್ಲಿ ಬಡವರಿಲ್ಲವೆ? ಅವರ‍್ಯಾಕೆ ಮತಾಂತರವಾಗುವುದಿಲ್ಲ? ಬಡ ವರ್ಗದ ಹಿಂದೂಗಳಿಗೆ ಶಿಕ್ಷಣ ಉದ್ಯೋಗ ಸಿಗಬೇಕು. ಹಿಂದೂ ಸಮಾಜ ಊಹೆಗೂ ನಿಲುಕದಷ್ಟು ದೊಡ್ಡದಿದೆ. ಒಂದು ಸಂಘಟನೆಯಿಂದ ಜಾಗೃತಿ ಅಸಾಧ್ಯ. ಬಹುಸಂಸ್ಕೃತಿಯ ದೇಶದಲ್ಲಿ ಸಂಘಟನೆಗಳು ಹುಟ್ಟಿಕೊಳ್ಳುತ್ತ ನದಿಯಂತೆ ಹರಿಯಬೇಕು’ ಎಂದು ಹೇಳಿದರು.