ಪ್ರತಿ ವಿದ್ಯಾರ್ಥಿಯೂ ವಿಜ್ಞಾನಿಯಾಗಬೇಕು: ಸಂಸದ ಪ್ರಹ್ಲಾದ ಜೋಶಿ

6
ವಿಜಯನಗರ ಪದವಿಪೂರ್ವ ಕಾಲೇಜಿನಲ್ಲಿ ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಉದ್ಘಾಟನೆ

ಪ್ರತಿ ವಿದ್ಯಾರ್ಥಿಯೂ ವಿಜ್ಞಾನಿಯಾಗಬೇಕು: ಸಂಸದ ಪ್ರಹ್ಲಾದ ಜೋಶಿ

Published:
Updated:
Deccan Herald

ಹುಬ್ಬಳ್ಳಿ: ಜಗತ್ತಿನ ವಿಜ್ಞಾನ ನಕಾಶೆಯಲ್ಲಿ ಭಾರತ ದಾಪುಗಾಲು ಹಾಕುತ್ತಿದ್ದು, ಪ್ರತಿ ವಿದ್ಯಾರ್ಥಿಯೂ ವಿಜ್ಞಾನಿಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಯಸುತ್ತಿದ್ದಾರೆ. ಆದ್ದರಿಂದ ಶಾಲಾ ಹಂತದಲ್ಲಿಯೇ ಅಟಲ್‌ ಟಿಂಕರಿಂಗ್ ಲ್ಯಾಬ್‌ ನೀಡಲಾಗುತ್ತಿದೆ. ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ಕನಕದಾಸ ಶಿಕ್ಷಣ ಸಮಿತಿಯ ವಿಜಯನಗರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಅಟಲ್‌ ಟಿಂಕರಿಂಗ್ ಲ್ಯಾಬ್‌ ಮತ್ತು ಸ್ವಚ್ಛತೆಯೇ ಸೇವೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳಲ್ಲಿ ಪ್ರಯೋಗಶೀಲತೆ, ಹೊಸತನ ಬೆಳೆಸಬೇಕೆಂದು ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಟಿಂಕರಿಂಗ್‌ ಲ್ಯಾಬ್‌ಗೆ ದೇಶಾದ್ಯಂತ ಒಟ್ಟು 16 ಸಾವಿರ ಅರ್ಜಿಗಳು ಬಂದಿದ್ದವು. ಇದರಲ್ಲಿ 1500 ಸಂಸ್ಥೆಗಳಿಗೆ ಅವಕಾಶ ಲಭಿಸಿದೆ. ಪ್ರಯೋಗಾಲಯದಲ್ಲಿರುವ ಸಾಮಗ್ರಿಗಳು ಹಾಳಾದರೂ ಚಿಂತೆಯಿಲ್ಲ, ಮುಕ್ತವಾಗಿ ಬಳಸಲು ವಿದ್ಯಾರ್ಥಿಗಳಿಗೆ ಅವಕಾಶ ಕೊಡಬೇಕು’ ಎಂದರು.

‘ಸ್ವಚ್ಛತೆಗೆ ಆದ್ಯತೆ ನೀಡಲು ಖುದ್ದು ಮೋದಿ ಅವರೇ ಪೊರಕೆ ಹಿಡಿದ ಕಾರಣ ಹೆಸರಾಂತ ಉದ್ಯಮಿಗಳು, ಚಿತ್ರನಟರು ಈ ಅಭಿಯಾನದಲ್ಲಿ ಭಾಗಿಯಾದರು. ಸ್ವಾತಂತ್ರ್ಯ ರಾಷ್ಟ್ರ ನಿರ್ಮಾಣ ಮಾಡಲು ಹಿಂದೆ ಹೋರಾಟಗಾರರ ಅಗತ್ಯವಿತ್ತು. ಈಗ ಸ್ವಚ್ಛಾಗ್ರಹಿಗಳ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಶಾಸಕ ಜಗದೀಶ ಶೆಟ್ಟರ್‌ ಮಾತನಾಡಿ ‘ಫೋಟೊ ಸಲುವಾಗಿ ಮಾತ್ರ ಸ್ಚಚ್ಛತೆ ಕೆಲಸ ಮಾಡಬಾರದು. ಸಮಾಜದ ಬಗ್ಗೆ ನಿಜವಾದ ಕಳಕಳಿ ಇರಬೇಕು’ ಎಂದರು.

ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶಾಂತಣ್ಣ ವೈ. ಕಡಿವಾಳ, ಕಾರ್ಯದರ್ಶಿ ರವಿ ದಂಡಿನ, ಕಾಲೇಜಿನ ಪ್ರಾಚಾರ್ಯರಾದ ಸಂದೀಪ ಬೂದಿಹಾಳ, ಡಾ. ಕೆ. ಮಲ್ಲಿಕಾರ್ಜುನ, ಪಾಲಿಕೆ ಸದಸ್ಯ ಮಹೇಶ ಬುರ್ಲಿ, ಪ್ರೊ. ಎಚ್ ವಿ ಬೆಳಗಲಿ, ಮಲ್ಲಿಕಾರ್ಜುನ ಸಾಹುಕಾರ, ಜೆ. ಕೆ ವೆಂಕಟೇಶ, ರಾಜೇಶ್ವರಿ ಇದ್ದರು. ಡಾ. ಪಿ ಎಸ್ ಹೆಗಡೆ ನಿರೂಪಿಸಿದರು.

ಶಿಕ್ಷಣ ಸಂಸ್ಥೆ ಸಮೂಹ ವಿದ್ಯಾಲಯದ ವತಿಯಿಂದ ಕೃಷಿ ಉತ್ಪನ್ನ ತರಬೇತಿ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಸ್ವಚ್ಛತೆಯೇ ಸೇವೆ ಕಾರ್ಯಕ್ರಮದಲ್ಲಿ ಪ್ರಹ್ಲಾದ ಜೋಶಿ ಹಾಗೂ ಜಗದೀಶ ಶೆಟ್ಟರ್ ಸ್ವಚ್ಛತಾ ಕಾರ್ಯ ಮಾಡಿದರು. ಸಂದೀಪ ಬೂದಿಹಾಳ, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ರವಿ ಬೆಲ್ಲದ, ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ಸ್ವಯಂ ಸೇವಕರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !