ಸಂಪೂರ್ಣ ಬೆಳೆ– ಟ್ರಾಕ್ಟರ್ ಸಾಲ ಮನ್ನಾಕ್ಕೆ ಆಗ್ರಹ

7

ಸಂಪೂರ್ಣ ಬೆಳೆ– ಟ್ರಾಕ್ಟರ್ ಸಾಲ ಮನ್ನಾಕ್ಕೆ ಆಗ್ರಹ

Published:
Updated:
Deccan Herald

ಹುಬ್ಬಳ್ಳಿ: ಬೆಳೆ ಮತ್ತು ಟ್ರಾಕ್ಟರ್ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ರೈತ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿವೆ.

ನಗರದ ಟ್ರಾಕ್ಟರ್ ಮಾಲೀಕರ ಹಿತಾಭಿವೃದ್ಧಿ ಸಂಘ ಕಚೇರಿಯಲ್ಲಿ ಶುಕ್ರವಾರ ಸೇರಿದ ರೈತರ ಹಾಗೂ ಕೃಷಿ ಟ್ರಾಕ್ಟರ್ ಮಾಲೀಕರ ಸಂಘ, ಭಾರತೀಯ ಕೃಷಿಕ ಸಮಾಜ, ರಾಜ್ಯ ರೈತ ಸಂಘ, ಪಕ್ಷಾತೀತ ರೈತ ಸಂಘ, ಕರ್ನಾಟಕ ಸಂಗ್ರಾಮ ಸೇನೆ ಸದಸ್ಯರು ಚರ್ಚೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಂಡರು. ಬೇಡಿಕೆಗಳ ಕುರಿತ ಮನವಿ ಪತ್ರವನ್ನು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸಲ್ಲಿಸಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಈ ವರ್ಷವೂ ಮಳೆ ಕೊರತೆಯಾಗಿ ಬರಗಾಲ ಆವರಿಸಿರುವುದರಿಂದ ರೈತರ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ. ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸಾವಿರರು ರೈತರಿಗೆ ಈ ವರೆಗೆ ಬೆಳೆ ವಿಮೆ ಮೊತ್ತ ಪಾವತಿಯಾಗಿಲ್ಲ. ಈ ಕೂಡಲೇ ಅದನ್ನು ರೈತರ ಖಾತೆಗೆ ಹಾಕಬೇಕು ಹಾಗೂ ಅದನ್ನು ಸಾಲದ ಮೊತ್ತಕ್ಕೆ ಕಡಿತಗೊಳಿಸಿಕೊಳ್ಳಬಾರದು ಎಂದು ಟ್ರಾಕ್ಟರ್ ಮಾಲೀಕರ ಹಿತಾಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಬಿ. ಇನಾಮತಿ ಹೇಳಿದರು.

ಬೆಂಬಲ ಬೆಲೆ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ರೈತರ ಪರ ನಿಲ್ಲಬೇಕು. ರೈತರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಮಳೆಯಾಗದ ಪ್ರದೇಶಗಳನ್ನು ಬರಗಾಲಪೀಡಿತ ಎಂದು ಈ ಕೂಡಲೇ ಘೋಷಿಸಿ ಪರಿಹಾರ ಕಾರ್ಯ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.

ಧಾರವಾಡ, ಹಾವೇರಿ, ಗದಗ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಿಲ್ಲ. ಸಕಾಲದಲ್ಲಿ ಮಳೆಯಾಗದ ಕಾರಣ ಫಸಲು ಒಣಗಿ ಹೋಗಿದೆ. ಅಳಿದುಳಿದ ಫಸಲಿಗೂ ಸೂಕ್ತ ಬೆಲೆ ಸಿಗದ ಕಾರಣ ನಷ್ಟ ಅನುಭವಿಸುಂತಾಗಿದೆ ಎಂದು ಅಣ್ಣಿಗೇರಿಯ ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ಜಯದೇವ ಹೂಗಾರ ಒತ್ತಾಯಿಸಿದರು.

ಮುಖಂಡರಾದ ಮಹೇಶ ಹೊಗೆಸೊಪ್ಪಿನ, ಬಿ.ಸಿ. ಭರಮಗೌಡರ, ರಾಮಣ್ಣ ಬೊಮ್ಮೊಜಿ ಹಾವೇರಿ, ಗುರುನಾಥ ಬೀರನವರ, ಐನಗೌಡ ಇದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !