ಧಾರವಾಡ: ನಗರದ ಹೊಸಯಲ್ಲಾಪುರದ ಕಸ ಘಟಕದಲ್ಲಿ ಕಸ ರಾಶಿಗೆ ಹೊತ್ತಿಕೊಂಡಿದ್ದ ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿದಿದೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪಾಲಿಕೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಕಸದ ರಾಶಿಗಳಿಗೆ ಹೊತ್ತಿಕೊಂಡಿದ್ ಬೆಂಕಿಯನ್ನು ನೀರು ಹರಿಸಿ ನಂದಿಸಲಾಗುತ್ತಿದೆ. ಜೆಸಿಬಿ ಯಂತ್ರ ಬಳಸಿ ರಾಶಿಗಳನ್ನು ಕೆದಕಿ ಒಳಗಿದ್ದ ಕೆಂಡಕ್ಕೂ ನೀರು ಹರಿಸಿ ಬೆಂಕಿ ಶಮನ ಮಾಡಲಾಗುತ್ತಿದೆ.

‘ಬೆಂಕಿ ಬಹುತೇಕ ತಹಬದಿಗೆ ಬಂದಿದೆ. ಹೊಗೆಯೂ ಕಡಿಮೆಯಾಗಿದೆ’ ಎಂದು ಪ್ರಭಾರ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಜು ತಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾರ್ಯಾಚರಣೆ ಮುಂದುವರಿದಿದೆ. ಇನ್ನೊಂದು ದಿನದಲ್ಲಿ ಬೆಂಕಿಯನ್ನು ಪೂರ್ಣ ನಂದಿಸುತ್ತೇವೆ’ ಎಂದು ಹು–ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.