ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಮೊದಲ ಕಿಸಾನ್‌ ರೈಲು 19ರಿಂದ ಬೆಂಗಳೂರಿನಿಂದ ಆರಂಭ

Last Updated 15 ಸೆಪ್ಟೆಂಬರ್ 2020, 16:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಈ ಬಾರಿಯ ಬಜೆಟ್‌ನಲ್ಲಿ ಮಂಡಿಸಲಾಗಿದ್ದ ಕಿಸಾನ್‌ ವಿಶೇಷ ರೈಲು ರಾಜ್ಯದಿಂದ ಸೆ. 19ರಿಂದ ಅ. 17ರ ತನಕ ಪ್ರತಿ ಶನಿವಾರ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಸಂಚಾರ ಆರಂಭಿಸಲಿದೆ. ಅಂದು ಮಧ್ಯಾಹ್ನ 4.45ಕ್ಕೆ ಬೆಂಗಳೂರಿನಿಂದ ಹೊರಟು ಸೋಮುವಾರ ರಾತ್ರಿ 11.45ಕ್ಕೆ ನಿಜಾಮುದ್ದೀನ್‌ ತಲುಪಲಿದೆ.

ಸೆ. 22ರಿಂದ ಅ. 20ರ ತನಕ ಪ್ರತಿ ಮಂಗಳವಾರ ಸಂಜೆ 5.45ಕ್ಕೆ ನಿಜಾಮುದ್ದೀನ್‌ನಿಂದ ಹೊರಟು ಶುಕ್ರವಾರ ಮಧ್ಯರಾತ್ರಿ 1.45ಕ್ಕೆ ಬೆಂಗಳೂರು ಮುಟ್ಟಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಈ ರೈಲಿನಲ್ಲಿ ಹಾಲು, ಮಾಂಸ ಮತ್ತು ಮೀನು ಸೇರಿದಂತೆ ಬಹಳಷ್ಟು ದಿನಗಳವರೆಗೆ ಕೆಡದ ವಸ್ತುಗಳನ್ನು ಸಾಗಿಸಲಾಗುತ್ತದೆ. ರೈಲ್ವೆ ಇಲಾಖೆ ಸಾರ್ವಜನಿಕ ಮತ್ತು ಖಾಸಗಿ ಸಹಯೋಗದಲ್ಲಿ ಈ ಸೌಲಭ್ಯ ಆರಂಭಿಸಿದೆ. ಬಹುವಿಧದ ಸರಕುಗಳು, ಸಾಗಣೆದಾರರು ಮತ್ತು ಗ್ರಾಹಕರಿಂದ ಕೂಡಿದ ರೈಲು ಇದಾಗಿದೆ. ಆದರೆ, ಪ್ರಯಾಣಿಕರ ಸಂಚಾರಕ್ಕೆ ಅವಕಾಶವಿಲ್ಲ.

ವಿಶೇಷ ರೈಲು 10 ವಿಪಿಎಚ್‌ (ಅಧಿಕ ಸಾಮರ್ಥ್ಯದ ಪಾರ್ಸಲ್‌ ವ್ಯಾನ್) ಹೊಂದಿದೆ. ಮೈಸೂರು, ಹಾಸನ, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ, ಲೋಂಡಾ, ಬೆಳಗಾವಿ, ಮೀರಜ್‌, ಪುಣೆ, ಮನ್ಮಾಡ್‌, ಭೂಸಾವಾಲ್‌, ಇಟಾರ್ಸಿ, ಭೋಪಾಲ್‌, ಝಾನ್ಸಿ, ಆಗ್ರಾ ಕಂಟೋನ್‌ಮೆಂಟ್‌ ಮತ್ತು ಮಥುರಾ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಈ ಎಲ್ಲ ನಿಲ್ದಾಣಗಳಲ್ಲಿ ಸರಕು ಲೋಡ್ ಮತ್ತು ಅನ್‌ಲೋಡ್ ಮಾಡಲು ಅವಕಾಶವಿದೆ. ರೈತರು ತಮ್ಮ ಸರಕುಗಳಿಗೆ ಸೂಕ್ತ ಬೆಲೆ ಪಡೆಯಲು ಹೊಸ ರೈಲಿನ ಸೌಲಭ್ಯ ಪಡೆದುಕೊಳ್ಳಬೇಕು ಎಂದು ರೈಲ್ವೆ ಇಲಾಖೆ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT