ನಾಲ್ಕೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲು

7
ಒಂದು ಸ್ಥಾನಕ್ಕೆ ಇಬ್ಬರು ಆಕಾಂಕ್ಷೆ ವ್ಯಕ್ತಪಡಿಸಿದ ಕಾರಣ ಗೊಂದಲ– ಕುತೂಹಲ

ನಾಲ್ಕೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲು

Published:
Updated:

ಹುಬ್ಬಳ್ಳಿ:  ಪಾಲಿಕೆಯ ನಾಲ್ಕೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳು ಬಿಜೆಪಿ ಪಾಲಾಗಿದ್ದು, ಮೂರಕ್ಕೆ ಅವಿರೋಧ ಆಯ್ಕೆಯಾದರೆ ಒಂದಕ್ಕೆ ನಡೆದ ಚುನಾವಣೆ ಕುತೂಹಲ ಕೆರಳಸಿತ್ತು.

ಹಣಕಾಸು ತೆರಿಗೆ ಹಾಗೂ ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರಾಮಪ್ಪ ಕೃಷ್ಣಪ್ಪ ಬಡಿಗೇರ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶಿವಾನಂದ ಮುತ್ತಣ್ಣವರ, ನಗರ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕ್ರಮವಾಗಿ ಲಕ್ಷ್ಮಿ ಲಕ್ಷ್ಮಣ ಉಪ್ಪಾರ ಹಾಗೂ ಅಶ್ವಿನಿ ಮಜ್ಜಗಿ ಆಯ್ಕೆಯಾದರು.

ಅವಿರೋಧ ಆಯ್ಕೆಯೇ ನಡೆಯಬಹುದು ಎಂದು ಊಹಿಸಲಾಗಿತ್ತು, ಆದರೆ ಹಣಕಾಸು ಸ್ಥಾಯಿ ಸಮಿತಿ ಸ್ಥಾನಕ್ಕೆ ಲಕ್ಷ್ಮಣ ಗಂಡಗಾಳೇಕರ್ ಅವರೂ ಆಕಾಂಕ್ಷಿಯಾದ ಕಾರಣ ಕೆಲಕಾಲ ಗೊಂದಲ ಹಾಗೂ ಕೆಲ ನಿಮಿಷಗಳ ಕುತೂಹಲಕಾರಿ ಬೆಳವಣಿಗೆ ನಡೆಯಿತು. ಬೆಳಿಗ್ಗೆ 11 ಗಂಟೆಗೆ ಚುನಾವಣಾ ಪ್ರಕ್ರಿಯೆ ಅರಂಭವಾಗಬೇಕಿತ್ತು. ಲಕ್ಷ್ಮಣ ಅವರು ಸಭೆಗೆ ಬಾರದ ಕರಣ ಸ್ವಲ್ಪ ವಿಳಂಬವಾಯಿತು.

ಚುನಾವಣಾ ಪ್ರಕ್ರಿಯೆಯನ್ನು ವಿನಾಕಾರಣ ತಡ ಮಾಡಿದ ಮೇಯರ್ ಅವರ ವಿರುದ್ಧ ವಿರೋಧ ಪಕ್ಷದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಚುನಾವಣೆ ನಡೆಸುವಂತೆ ಏರು ಧ್ವನಿಯಲ್ಲಿ ತಾಕೀತು ಮಾಡಿದರು. ಲಕ್ಷ್ಮಣ ಅವರ ಸಭೆಗೆ ಬಂದ ನಂತರ ಚುನಾವಣಾ ಪ್ರಕ್ರಿಯೆ ಆರಂಭವಾಯಿತು. ಏಳು ಮಂದಿ ಸಮಿತಿ ಸದಸ್ಯರ ಪೈಕಿ ಮೂವರು ಕಾಂಗ್ರೆಸ್ ಸದಸ್ಯರಿದ್ದು ಅವರಲ್ಲಿ ಒಬ್ಬರಾದ ಸುಧಾ ಮಣಿಕುಂಟ್ಲ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಸದಸ್ಯರಾದ ಅನಸೂಯ ಅವರು ಮತದಾನದ ವೇಳೆ ಗೊಂದಲಕ್ಕೆ ಒಳಗಾದರು. ಹೇಗೆ ಮತದಾನ ಮಾಡಬೇಕು ಎಂದು ಮತ್ತೊಮ್ಮೆ ಅವರಿಗೆ ಮಾಹಿತಿ ನೀಡಲಾಯಿತು. ಮತ ಹಾಕಿ ಬಂದ ಅವರು ವಿರೋಧ ಪಕ್ಷದ ಸುಧಾ ಮಣಿಕುಂಟ್ಲ ಅವರ ಕೆನ್ನೆ ಸವರಿದ್ದು, ಅವರ ಯಾರ ಪರ ಮತ ಚಲಾಯಿಸಿರಬಹುದು ಎಂಬ ಕುತೂಹಲಕ್ಕೆ ಕಾರಣವಾಯಿತು.

ಎಣಿಕೆ ಆರಂಭವಾದ ನಂತರ ಮೊದಲ ಮತ ಸುಧಾ ಪರವಾಗಿ, ಎರಡನೇ ಮತ ರಾಮಪ್ಪ ಅವರ ಪರವಾಗಿ, ಮೂರನೆಯ ಮತ ಸುಧಾ, ನಾಲ್ಕನೇ ಮತ ಕೃಷ್ಣಪ್ಪ, ಐದನೇ ಮತ ಸುಧಾ ಹಾಗೂ ಆರನೇ ಮತ ಕೃಷ್ಣಪ್ಪ ಅವರ ಪರವಾಗಿ ಚಲಾವಣೆಯಾಗಿದ್ದವು. ಕೊನೆಯ ಮತವವನ್ನೂ ಪಡೆದ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !