ಆರೋಗ್ಯ ರಕ್ಷಣೆಯಲ್ಲಿ ಎಫ್‌ಪಿಎಐ ಕಾರ್ಯ ಶ್ಲಾಘನೀಯ

7

ಆರೋಗ್ಯ ರಕ್ಷಣೆಯಲ್ಲಿ ಎಫ್‌ಪಿಎಐ ಕಾರ್ಯ ಶ್ಲಾಘನೀಯ

Published:
Updated:
ಧಾರವಾಡದ ಎಫ್‌ಪಿಎಐ ಸಭಾಂಗಣದಲ್ಲಿ ನಡೆದ ಸಂಸ್ಥೆಯ 69 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಇಂದಿರಾಪ್ರಸಾದ್ ಅವರನ್ನು ಗೌರವಿಸಲಾಯಿತು. ಪ್ರಫುಲ್ಲಾ ನಾಯಕ್, ಡಾ.ಜಯಶ್ರೀ ದೇಶಪಾಂಡೆ, ವಿಶ್ವನಾಥ ಕೋಳಿವಾಡ ಇದ್ದಾರೆ

ಧಾರವಾಡ: ‘ತಾಯಿ, ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಫ್ಯಾಮಿಲಿ ಪ್ಲಾನಿಂಗ್‌ ಅಸೋಸಿಯೇಷನ್‌ ಹೊಸ ಕ್ರಾಂತಿ ಮಾಡಿದೆ’ ಎಂದು ಸ್ವಯಂ ಸೇವಕಿ ಇಂದಿರಾಪ್ರಸಾದ್‌ ಹೇಳಿದರು. 

ಇಲ್ಲಿನ ಎಫ್‌ಪಿಎಐನ 69 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1949ರಲ್ಲಿ  ಸ್ಥಾಪನೆಗೊಂಡ ಈ ಸಂಸ್ಥೆ  ದೇಶದಾದ್ಯಂತ 42 ಶಾಖೆಗಳನ್ನು ಹೊಂದಿದೆ. ಕೇವಲ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯಲ್ಲದೇ ಪ್ರತಿ ವರ್ಷ 7 ಸಾವಿರಕ್ಕಿಂತ ಹೆಚ್ಚು ಯುವ ಜನರಿಗೆ ಸಮಗ್ರ ಲೈಂಗಿಕ ನಡವಳಿಕೆ ಶಿಕ್ಷಣ, ಆಪ್ತ ಸಮಾಲೋಚನೆ ಹಾಗೂ ಆರೋಗ್ಯ ಸೇವೆ ಒದಗಿಸುತ್ತಿದೆ’ ಎಂದರು. 

ಸೃಷ್ಟಿ ಕಾಲೇಜು ಪ್ರಾಚಾರ್ಯ ಪ್ರೊ.ಆರ್.ಜಿ. ಕ್ಯಾಮನ್‌ ಮಾತನಾಡಿ, ‘ಉತ್ತಮ ಸಮಾಜ ನಿರ್ಮಾಣ ಆಗಬೇಕಾದರೆ ಯುವಜನತೆ ದೈಹಿಕ, ಮಾನಸಿಕ ಹಾಗೂ ನೈತಿಕವಾಗಿ ಸದೃಢವಾಗಿರಬೇಕು. ಇದಕ್ಕೆ ಉತ್ತಮ ಸಂಸ್ಕಾರ, ಜ್ಞಾನ ಮತ್ತು ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು’ ಎಂದರು.

ವಿಶ್ವನಾಥ ಕೋಳಿವಾಡ ಮಾತನಾಡಿ, ‘ಜನರ ಆರೋಗ್ಯದ ಅವಶ್ಯಕತೆಗಳನ್ನು ಗುರುತಿಸಿ, ಸೇವೆ ಸಲ್ಲಿಸುತ್ತಿರುವ ಎಫ್‌ಬಿಐ ದೊಡ್ಡ ಸ್ವಯಂಸೇವಾ ಸಂಸ್ಥೆಯಾಗಿದೆ’ ಎಂದರು. 

ಡಾ.ಜಯಶ್ರೀ ದೇಶಪಾಂಡೆ, ಸುಜಾತಾ ಆನಿಶೆಟ್ಟರ್‌, ಭೀಮಸೇನ ಸಾರಥಿ, ಸುಬೇಂದು ಆಕಳವಾಡಿ, ಎನ್.ಎಫ್.ಮಡಿವಾಳರ ಇದ್ದರು.

ಇದೇ ಸಂದರ್ಭದಲ್ಲಿ ಎಫ್‌ಪಿಎಐ ನಲ್ಲಿ ದೀರ್ಘಕಾಲ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ ಇಂದಿರಾ ಪ್ರಸಾದ್ ಹಾಗೂ ವಿಶ್ವನಾಥ ಕೋಳಿವಾಡ ಅವರನ್ನು ಸನ್ಮಾನಿಸಲಾಯಿತು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !