ಹುಬ್ಬಳ್ಳಿ: ತಾಲ್ಲೂಕಿನ ದೇವರಗುಡಿಹಾಳ ಗ್ರಾಮ ಪಂಚಾಯಿತಿಗೆ 2022–23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ರಾಯಸಾಬ ಮುನ್ನಾನವರ, ಪಿಡಿಒ ಹನುಮಂತಪ್ಪ ಕಲಹಾಳ ಪುರಸ್ಕಾರ ಸ್ವೀಕರಿಸಿದರು.
‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಯೋಜನೆಗಳನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ. ಮನೆ ಮನೆಗಳಿಂದ ಹಸಿ ಕಸ ಮತ್ತು ಒಣ ಕಸ ಸಂಗ್ರಹಿಸುವುದು, ಘನ ತ್ಯಾಜ್ಯ ವಿಲೇವಾರಿ, ಗ್ರಂಥಾಲಯಗಳ ನಿರ್ಮಾಣ, ಬೀದಿ ದೀಪಗಳ ಅಳವಡಿಸುವಿಕೆ, ದನದ ಕೊಟ್ಟಿಗೆ ನಿರ್ಮಾಣ, ಉತ್ತಮವಾದ ರಸ್ತೆ, ನೀರು ಸೇರಿ ಮೂಲಸೌಕರ್ಯ ಕಲ್ಪಿಸಿದ್ದಕ್ಕಾಗಿ ಪಂಚಾಯಿತಿಗೆ ಈ ಪುರಸ್ಕಾರ ದೊರೆತಿದೆ’ ಎಂದು ಪಿಡಿಒ ಹನುಮಂತಪ್ಪ ಕಲಹಾಳ ತಿಳಿಸಿದ್ದಾರೆ.
‘ಗಾಂಧಿ ಗ್ರಾಮ ಪುರಸ್ಕಾರ ಬಂದಿರುವುದು ಖುಷಿ ತಂದಿದೆ. ಎಲ್ಲರ ಸಹಕಾರದಿಂದ ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುವ ಕನಸು ಇದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಯಸಾಬ ಮುಲ್ಲಾನವರ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.