ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಫೆ.5ಕ್ಕೆ ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯದ ವಾರ್ಷಿಕೋತ್ಸವ

Last Updated 3 ಫೆಬ್ರುವರಿ 2023, 5:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ವೈಷ್ಣವಿ ಗಂಗೂಬಾಯಿ ಹಾನಗಲ್ ಹೆರಿಟೇಜ್ ಟ್ರಸ್ಟ್ ವತಿಯಿಂದ ದೇಶಪಾಂಡೆ ನಗರದಲ್ಲಿರುವ ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯದ 18ನೇ ವಾರ್ಷಿಕೋತ್ಸವವನ್ನು ಫೆ.5ರಂದು ಅಶೋಕ ನಗರದ ಡಿ.ಎಸ್.‌ ಕರ್ಕಿ ಕನ್ನಡ ಭವನದಲ್ಲಿ ಸಂಜೆ 5ಕ್ಕೆ ಹಮ್ಮಿಕೊಳ್ಳಲಾಗಿದೆ’ ಎಂದು ಟ್ರಸ್ಟ್ ಅಧ್ಯಕ್ಷೆ ಹಾಗೂ ಗಂಗೂಬಾಯಿ ಅವರ ಮೊಮ್ಮಗಳು ವೈಷ್ಣವಿ ಹಾನಗಲ್ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದೆ’ ಎಂದರು‌.

‘ಕಾರ್ಯಕ್ರಮದಲ್ಲಿ ನಾನು ಮತ್ತು ಶಿಷ್ಯವೃಂದದಿಂದ ಗಾಯನ ಇರಲಿದೆ. ಮನುಕುಮಾರ ಹಿರೇಮಠ ತಬಲಾ ಮತ್ತು ಧಾರವಾಡದ ಸೃಷ್ಟಿ ಸುರೇಶ ಅವರು ಸಿತಾರ್ ವಾದನ ಪ್ರಸ್ತುತಪಡಿಸಲಿದ್ದಾರೆ. ಪ್ರಸಾದ ಮಡಿವಾಳರ ಮತ್ತು ಡಾ.‌ ರಚನಾ ನಾಡಗಿರ್ ಹಾರ್ಮೋನಿಯಂನಲ್ಲಿ ಸಾಥ್ ನೀಡಲಿದ್ದಾರೆ. ರಷ್ಯಾದ ವಿದ್ಯಾರ್ಥಿಯೊಬ್ಬರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ ಇರಲಿದೆ’ ಎಂದು ತಿಳಿಸಿದರು.

ವಿದ್ಯಾಲಯದ ಮಹೇಶ ತಲಕಾಡ್ ಮತ್ತು ವೀಣಾ ನಾಡಗೀರ ಇದ್ದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT