ಗುರುವಾರ , ಅಕ್ಟೋಬರ್ 29, 2020
28 °C

ಚಿಕಿತ್ಸೆ ಪಡೆದ ಆಸ್ಪತ್ರೆಗೆ ಯಂತ್ರಗಳ ಉಡುಗೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ಅಂಜುಮನ್ ಎ. ಇಸ್ಲಾಂ ಸಂಸ್ಥೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ವಕೀಲ ಸಾಜೀದ್‌ ಅಲಿಖಾನ್‌ ಕುಲಕರ್ಣಿ ಮತ್ತು ಕುಟುಂಬದವರು ಆಸ್ಪತ್ರೆಗೆ ₹1 ಲಕ್ಷ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕ್ಯಾರಿಡಿಕ್‌ ಮತ್ತು ಮಲ್ಟಿ ಪ್ಯಾರಾಮೀಟರ್‌, ರೋಗಿಯ ಮೇಲೆ ನಿಗಾ ವಹಿಸುವ ಯಂತ್ರ ಉಡುಗೊರೆ ಕೊಟ್ಟಿದ್ದಾರೆ. ಇವರನ್ನು ಅಂಜುಮನ್‌ ಸಂಸ್ಥೆ ಅಧ್ಯಕ್ಷ ಮಹ್ಮದ್‌ ಯುಸೂಫ್‌ ಸವಣೂರ ಮತ್ತು ಉಪಾಧ್ಯಕ್ಷ ಅಲ್ತಾಫ್‌ ನವಾಜ್ ಕಿತ್ತೂರ ಸನ್ಮಾನ ಮಾಡಿದರು.

ಸಂಸ್ಥೆಯ ಆಸ್ಪತ್ರೆ ಮಂಡಳಿ ಕಾರ್ಯದರ್ಶಿ ಎಂ.ಎ. ಪಠಾಣ, ಅಬ್ದುಲ್‌ ರಜಾಕ್‌ ನಾಯಕ, ಅಕ್ಬರ್‌ ಕುಮಾಟಕರ, ಶಫಿವುಲ್ಲಾ ಬೆಳಗಾಂ, ಮುನ್ನಾ ಮಾರಕರ, ಜೈಲಾನಿ ಬ್ಯಾಡಗಿ, ಶಫಿ ಗದಗ, ಮದಾರಸಾಬ್‌ ಮಕನದಾರ್‌ ಮತ್ತು ಹುಸೇನಸಾಬ್ ಜಾಗೀರದಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು