ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಗಿಫ್ಟ್‌ಗೆ ಮನಸೋತು ₹2 ಲಕ್ಷ ಕಳೆದುಕೊಂಡ ಯುವತಿ

Published 24 ಮೇ 2023, 5:31 IST
Last Updated 24 ಮೇ 2023, 5:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿವಾಹ ವೆಬ್‌ಸೈಟ್‌ನಲ್ಲಿ ಸಂಪರ್ಕಕ್ಕೆ ಬಂದ ವ್ಯಕ್ತಿಯ ಗಿಫ್ಟ್‌ ಪ್ರಲೋಭನೆಗೆ ಸಿಕ್ಕ ಯುವತಿಯೊಬ್ಬರು, ತನ್ನ ಬ್ಯಾಂಕ್ ಖಾತೆಯಿಂದ ₹2 ಲಕ್ಷ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ.

ಭಾರತ್ ಮ್ಯಾಟ್ರಿಮೋನಿಯಲ್‌ನಲ್ಲಿ ತನ್ನ ವೈಯಕ್ತಿಕ ವಿವರವನ್ನು ಹಾಕಿದ್ದ ಯುವತಿಯನ್ನು ವಂಚಕ ವಾಟ್ಸ್ಆ್ಯಪ್‌ನಲ್ಲಿ ಸಂಪರ್ಕಿಸಿದ್ದ. ‘ತಾನು ಅಮೆರಿಕದ ನ್ಯೂಯಾರ್ಕ್‌ನಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದು, ನೀವು ನನಗೆ ಇಷ್ಟವಾಗಿದ್ದೀರಿ’ ಎಂದು ನಂಬಿಸಿದ್ದ. ನಿಮಗಾಗಿ ದುಬಾರಿ ಗಿಫ್ಟ್‌ ಕಳಿಸಿದ್ದೇನೆ ಎಂದು ಹೇಳಿದ್ದ.

ನಂತರ ಆರ್‌ಬಿಐ ಹೆಸರಿನಲ್ಲಿ ನಕಲಿ ಇಮೇಲ್ ಐ.ಡಿ.ಗಳಿಂದ ಯುವತಿಯನ್ನು ಸಂಪರ್ಕಿಸಿದ್ದ ವಂಚಕ, ‘ನಿಮಗೆ ಒಂದು ಕೋಟಿಗೂ ಅಧಿಕ ಮೌಲ್ಯದ ವಸ್ತುಗಳ ಗಿಪ್ಟ್ ಬಂದಿರುವುದರಿಂದ, ಅದಕ್ಕೆ ತೆರಿಗೆ ಪಾವತಿಸಬೇಕು’ ಎಂದು ನಂಬಿಸಿದ್ದ. ನಂತರ, ಅವರ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT