ಶಿಕ್ಷಣ ಬಿಟ್ಟ ಮಕ್ಕಳಿಗೆ ಬಾಲಮಂದಿರದಲ್ಲಿ ಆಶ್ರಯದ ಭರವಸೆ

7

ಶಿಕ್ಷಣ ಬಿಟ್ಟ ಮಕ್ಕಳಿಗೆ ಬಾಲಮಂದಿರದಲ್ಲಿ ಆಶ್ರಯದ ಭರವಸೆ

Published:
Updated:
Deccan Herald

ಧಾರವಾಡ: ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ವಾಸವಾಗಿರುವ ಬಡಕುಟುಂಬದ ಹೆಣ್ಣುಮಕ್ಕಳಿಗೆ ಶಿಕ್ಷಣ, ಆರೋಗ್ಯದ ರಕ್ಷಣೆಯ ಭರವಸೆ ನೀಡಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಬಾಲಮಂದಿರದಲ್ಲಿ ಆಶ್ರಯ ನೀಡಲು ಕ್ರಮಕೈಗೊಂಡಿದ್ದಾರೆ.

‘ಅಪ್ಪನ ಕನಸಿನ ಸಾಕಾರಕ್ಕೆ ಶಾಲೆ ಬಿಟ್ಟ ಮಕ್ಕಳು...’ ಶೀರ್ಷಿಕೆಯಡಿ ಶನಿವಾರ (ಅ. 6)ದ ಪ್ರಜಾವಾಣಿಯಲ್ಲಿ ವಿಶೇಷ ವರದಿ ಪ್ರಕಟಗೊಂಡಿತ್ತು. 

ಈ ವರದಿ ಆಧರಿಸಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ಅವರು ಘಟಕದ ಅಧಿಕಾರಿಗಳೊಂದಿಗೆ ಶನಿವಾರ ಬೆಳಿಗ್ಗೆ ಕಲ್ಲಪ್ಪ ಗಿಡ್ಡಪ್ಪ ಚನ್ನದಾಸರ ಅವರ ಜೋಪಡಿಗೆ ಭೇಟಿ ನೀಡಿ ಅವರ ಮೂವರು ಪುತ್ರಿಯರೊಂದಿಗೆ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ ಕಲ್ಲಪ್ಪ, ‘ಬಾಲಕಿಯರು ಶಿಕ್ಷಣ ಕಲಿಯಲು ಈಗ ಆಸಕ್ತಿ ತೋರಿಸುತ್ತಿಲ್ಲ. ನಾನು ಎಷ್ಟೇ ಕಷ್ಟ ಬಂದರು ಇವರನ್ನು ಓದಿಸಲು ಶಿಕ್ಷಣ ಕೊಡಿಸಲು ತಯಾರಿದ್ದೇನೆ. ಆದರೆ ನನ್ನ ಮಕ್ಕಳು ಮುಂದೆ ಓದಲು ನಿರಾಸಕ್ತಿ ತೋರುತ್ತಿದ್ದಾರೆ. ಮುರೂ ಜನ ಮಕ್ಕಳು ಮೊದಲು ಶಿಕ್ಷಣ ಕಲಿಯಲು ತುಂಬಾ ಆಸಕ್ತಿ ಹೋಂದಿದ್ದರು ಆದರೆ ನಂತರ ಎನಾಯಿತೊ ಗೊತ್ತಿಲ್ಲ ನಾವು ಮುಂದೆ ಓದುವುದಿಲ್ಲ ಹೊಲಿಗೆ ಕಲಿಯುತ್ತೆವೆ ಎಂದು ಹೇಳಿದ್ದಕ್ಕೆ ನಾನು ಸುಮ್ಮನಾದೆ’ ಎಂದರು.

ನಂತರ ಮೂವರು ಬಾಲಕಿಯರೊಂದಿಗೆ ಆಪ್ತಸಮಾಲೋಚನೆ ನಡೆಸಿದ ಅನ್ನಪೂರ್ಣ, ‘ಮಕ್ಕಳ ಕಲಿಕೆಗೆ ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ ಕಾಪಾಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸರ್ಕಾರ ಬಾಲಮಂದಿರಗಳನ್ನು ಸ್ಥಾಪಿಸಿದೆ. ಅಲ್ಲಿ ಆಯಾ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಶಿಕ್ಷಣ, ಉತ್ತಮ ಆಹಾರ, ಸಾಂಸ್ಕೃತಿಕ ಚಟುವಟಿಕೆ ಮತ್ತು ವೃತ್ತಿ ಆಧಾರಿತ ಕೌಶಲ್ಯಗಳನ್ನು ಕಲಿಸಲು ಕ್ರಮಕೈಗೊಂಡಿದೆ. ಅಗತ್ಯವಿರುವ ಸೌಲಭ್ಯಗಳನ್ನು ಮಕ್ಕಳಿಗೆ ಉಚಿತವಾಗಿ ನೀಡುವ ಮೂಲಕ ಮಾನಸಿಕವಾಗಿ ಮತ್ತು ಸಮಾಜದಲ್ಲಿ ಧೈರ್ಯದಿಂದ ಸಮರ್ಥವಾಗಿ ಬದುಕು ಪಾಠವನ್ನು ಕಲಿಸಲಾಗುತ್ತದೆ’ ಎಂದು ತಿಳಿಸಿದರು.

ಅಧಿಕಾರಿಯ ಮಾತಿಗೆ ಒಪ್ಪಿಗೆ ಸೂಚಿಸಿದ ಗೌರಮ್ಮ, ಗಂಗಮ್ಮ ಮತ್ತು ಗೀತಾ ಸೋದರಿಯರು ಬಾಲಮಂದಿರದಲ್ಲಿ ಆಶ್ರಯ ಪಡೆದು ಶಿಕ್ಷಣ ಮುಂದುವರಿಸಲು ಒಪ್ಪಿದರು. ಅ. 12ರಂದು ಬಾಲಕಿಯರ ಸರ್ಕಾರಿ ಬಾಲಮಂದಿರದಲ್ಲಿ ನಡೆಯುವ ಮಕ್ಕಳ ಕಲ್ಯಾಣ ಸಮಿತಿಗೆ ಮಕ್ಕಳೊಂದಿಗೆ ಹಾಜರಾಗುವುದಾಗಿ ಕಲ್ಲಪ್ಪ ಹೇಳಿದರು.

ಈ ಸಂದರ್ಭದಲ್ಲಿ ಘಟಕದ ಅಪ್ತಸಮಾಲೋಚಕರಾದ ಕುಮಾರಿ ವಿಶಾಲಾ, ಕುಸುಗಲ್ ಪಿಡಿಓ, ಶಿಕ್ಷಣ ಇಲಾಖೆ ಅಧಿಕಾರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !