ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ನಿರಾಮಯ ಮೆಡಿಕಲ್ ಸೆಂಟರ್ನ ‘ನಾರ್ತ್ ಕರ್ನಾಟಕ ಸ್ಲೀಪ್ ಸೆಂಟರ್’ ವತಿಯಿಂದ ವೈದ್ಯರು ಹಾಗೂ ಸಿಬ್ಬಂದಿ ವಾಕಥಾನ್ ಮಾಡುವ ಮೂಲಕ ಶುಕ್ರವಾರ ‘ಜಾಗತಿಕ ನಿದ್ರಾ ದಿನ’ ಆಚರಿಸಿದರು.

ಬೆಳಿಗ್ಗೆ ತೋಳನಕೆರೆ ಉದ್ಯಾನದಿಂದ ನಿರಾಮಯ ಮೆಡಿಕಲ್ ಸೆಂಟರ್ ತನಕ ನಡೆದ ವಾಕಥಾನ್ಗೆ ಹೃದ್ರೋಗ ತಜ್ಞ ಜಿ.ಬಿ. ಸತ್ತೂರು ಚಾಲನೆ ನೀಡಿದರು. ವಾಕಥಾನ್ನಲ್ಲಿ ಭಾಗವಹಿಸಿದ್ದ ವೈದ್ಯರು ಹಾಗೂ ಸಿಬ್ಬಂದಿಯು ನಿದ್ರೆಯ ಮಹತ್ವ, ನಿದ್ರಾಹೀನತೆಯಿಂದ ಉಂಟಾಗುವ ಅನಾರೋಗ್ಯ ಸಮಸ್ಯೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ನಂತರ ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೃದ್ರೋಗ ತಜ್ಞ ಅಮಿತ್ ಸತ್ತೂರು, ‘ಪ್ರತಿಯೊಬ್ಬರೂ ಕಡ್ಡಾಯವಾಗಿ ನಿತ್ಯ 7 ತಾಸು ನಿದ್ರೆ ಮಾಡಬೇಕು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ದಿನವಿಡೀ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಒತ್ತಡದ ಬದುಕಿನಿಂದಾಗಿ ಹಲವರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಇದರಿಂದ ಹೃದ್ರೋಗ, ಮಧುಮೇಹ, ನರದೌರ್ಬಲ್ಯ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಗಾಢ ನಿದ್ರೆ ಮಾಡುವುದರಿಂದ ಉತ್ತಮ ಆರೋಗ್ಯ ಕಾಯ್ದುಕೊಳ್ಳಬಹುದು’ ಎಂದರು.

ಡಾ.ದತ್ತು ನಾಡಿಗೇರ, ಡಾ.ಹರೀಶ್ ಜೋಶಿ ಮಾತನಾಡಿ, ‘ನಿದ್ರೆ ವೇಳೆ ಉಸಿರಾಟ ಸಮಸ್ಯೆ, ಗೊರಕೆ ಹೊಡೆಯುವುದು ಹಾಗೂ ನಿದ್ರಾಹೀನತೆ ಇವೆಲ್ಲವೂ ಅನಾರೋಗ್ಯದ ಲಕ್ಷಣ. ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಸಹ ಅಪಾಯಕಾರಿ. ಈ ರೀತಿಯ ಸಮಸ್ಯೆ ಎದುರಿಸುತ್ತಿರುವವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಅಗತ್ಯ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಉತ್ತಮ ಆರೋಗ್ಯ ಹೊಂದಬಹುದು’ ಎಂದು ತಿಳಿಸಿದರು.

ಡಾ.ಆರ್.ಐ. ದುಗ್ಗಾಣಿ, ಡಾ. ಗೋವಿಂದ ದೇಸಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.