ಸೋಮವಾರ, ನವೆಂಬರ್ 18, 2019
29 °C

ರಾಜ್ಯಪಾಲರಿಗೆ ರೈತರ ಕಾಳಜಿ ಇಲ್ಲ: ಕೌಲಗಿ

Published:
Updated:

ಹುಬ್ಬಳ್ಳಿ: ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಉರುಳಿಸಲು ಶಾಸಕರು ರಾಜೀನಾಮೆ ಸಲ್ಲಿಸಲು ರಾಜಭವನಕ್ಕೆ ಹೋದಾಗ ರಾಜ್ಯಪಾಲರು ಅವರನ್ನು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿದರು. ಆದರೆ, ಮೂರು ದಿನಗಳಿಂದ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಹೋರಾಟ ಮಾಡುತ್ತಿರುವ ಹೋರಾಟಗಾರರನ್ನು ರಾಜ್ಯಪಾಲರು ಭೇಟಿಯಾಗಿಲ್ಲ. ಅವರಿಗೆ ರೈತರನ್ನು ಕಂಡರೆ ಏಕೆ ನಿಷ್ಕಾಳಜಿ ಎಂದು ಧಾರವಾಡ ಜಿಲ್ಲಾ ಕಾಂಗ್ರೆಸ್‌ ವಕ್ತಾರ ವೇದವ್ಯಾಸ ಕೌಲಗಿ ಪ್ರಶ್ನಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಮಕ್ಕಳನ್ನು ಕಟ್ಟಿಕೊಂಡು ಮಹಿಳಾ ಹೋರಾಟಗಾರರು ಬಯಲಲ್ಲೇ ಮಲಗಿದ್ದರೂ ರಾಜ್ಯಪಾಲರು ಕಣ್ಣೆತ್ತಿ ಕೂಡ ನೋಡಿಲ್ಲ. ಇಂಥ ಕಟುಕ ಮನಸ್ಸು ಗುಜರಾತಿನವರಿಗೆ ಮಾತ್ರ ಇರಲು ಸಾಧ್ಯ’ ಎಂದು ಟೀಕಿಸಿದ್ದಾರೆ.

‘ಯಡಿಯೂರಪ್ಪ ಖುರ್ಚಿ ಉಳಿಸಿಕೊಳ್ಳಲು ಟೆಂಪಲ್‌ ರನ್‌ ಮಾಡುತ್ತಿದ್ದಾರೆ. ತಮ್ಮ ಮಕ್ಕಳನ್ನು ಮುಂದಿನ ವಾರಸುದಾರರನ್ನಾಗಿ ಮಾಡುವ ಚಿಂತೆಯಲ್ಲಿ ಮುಳುಗು ಹೋಗಿದ್ದಾರೆ. ಅವರ ಮಗ ವರ್ಗಾವಣೆ ವಸೂಲಿಯಲ್ಲಿ ತೊಡಗಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಇದಕ್ಕೆಲ್ಲ ರಾಜ್ಯದ ಜನರೇ ಕಾರಣ. ಬಾಲಾಕೋಟ್‌ ಮೇಲಿನ ದಾಳಿಯನ್ನೇ ಬಂಡವಾಳ ಮಾಡಿಕೊಂಡ ಬಿಜೆಪಿಗೆ ಜನರ ಮಧ್ಯ ಇರುವ ಯಾವುದೇ ಯೋಗ್ಯತೆಯಿಲ್ಲ. ಜನಪರ ಕಾಳಜಿ ಇಲ್ಲದ 25 ಜನ ಸಂಸದರನ್ನು ರಾಜ್ಯದ ಜನತೆ ಆಯ್ಕೆ ಮಾಡಿದ್ದಾರೆ. ಪದವೀಧರರು ಉದ್ಯೋಗವಿಲ್ಲದೇ ರಸೆಯಲ್ಲಿ ತಟ್ಟೆ ಹಿಡಿದು ಭಿಕ್ಷೆ ಬೇಡುವ ಸ್ಥಿತಿ ಬಂದಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)