ಗ್ರಾಹಕ– ಮಾಲೀಕ ಇಬ್ಬರೂ ಖುಷ್

7
ಐಷಾರಾಮಿ ಹೋಟೆಲ್‌ ತೆರಿಗೆ ಭಾರ ಇಳಿಸಿದ ಸರಕು ಮತ್ತು ಸೇವಾ ತೆರಿಗೆ

ಗ್ರಾಹಕ– ಮಾಲೀಕ ಇಬ್ಬರೂ ಖುಷ್

Published:
Updated:
Deccan Herald

ಹುಬ್ಬಳ್ಳಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಐಷಾರಾಮಿ ಹೋಟೆಲ್‌ಗಳ ತೆರಿಗೆ ಭಾರ ಕಡಿಮೆ ಮಾಡಿರುವುದು ಗ್ರಾಹಕ ಮತ್ತು ಹೋಟೆಲ್ ಮಾಲೀಕ ಇಬ್ಬರಿಗೂ ಸಮಾಧಾನ ತಂದಿದೆ.

ಜಿಎಸ್‌ಟಿ ಜಾರಿಯಾದ ನಂತರ ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರಲಿಲ್ಲ. ಈಗ ವಹಿವಾಟು ಇನ್ನಷ್ಟು ವೃದ್ಧಿಸಿದೆ ಎಂದು ಸಮಾಧಾನ ವ್ಯಕ್ತಪಡಿಸುತ್ತಾರೆ. ನೂತನ ತೆರಿಗೆ ಪದ್ಧತಿಯಲ್ಲಿ ಪಾವತಿ ವ್ಯವಸ್ಥೆ ಕ್ಲಿಷ್ಟಕರ ಎಂಬ ಆರೋಪ ಸಾಮಾನ್ಯವಾಗಿದೆ. ಅದರೆ ಇಲ್ಲಿ ಆ ಸಮಸ್ಯೆಯೂ ಇದ್ದಂತಿಲ್ಲ. ವೃತ್ತಿಪರ ಅಕೌಂಟೆಂಟ್‌ಗಳನ್ನು ನೇಮಿಸಿಕೊಂಡಿರುವುದರಿಂದ ಪಾವತಿಯ ಬಿಸಿ ಮಾಲೀಕರಿಗೆ ತಟ್ಟಿದಂತಿಲ್ಲ.  ಯಾವುದೇ ಹೊಸ ವ್ಯವಸ್ಥೆ ಜಾರಿಗೆ ಬಂದಾಗ ಸಹಜವಾಗಿಯೇ ಕಷ್ಟ ಅನಿಸುತ್ತದೆ. ಕಲಿತ ನಂತರ ಸುಲಭವಾಗುತ್ತದೆ ಎಂದು ಹೋಟೆಲ್ ಮಾಲೀಕರು ಮತ್ತು ಲೆಕ್ಕಪತ್ರ ವಿಭಾಗದವರು ಹೇಳುತ್ತಾರೆ.

ದುಬಾರಿ ಹೋಟೆಲ್‌ಗಳಲ್ಲಿ ಕೊಠಡಿಯ ಬಾಡಿಗೆ ದರವನ್ನು ಆಧರಿಸಿ ತೆರಿಗೆ ವಿಧಿಸಲಾಗುತ್ತದೆ. ಜಿಎಸ್‌ಟಿ ಪೂರ್ವದಲ್ಲಿ ಕೊಠಡಿಗೆ ಗರಿಷ್ಠ ₹7500 ಬಾಡಿಗೆ ಇದ್ದರೆ ಶೇ21ರಷ್ಟು ತೆರಿಗೆ ಕಟ್ಟಬೇಕಿತ್ತು. ಆದರೆ ಜಿಎಸ್‌ಟಿ ನಂತರ ಅದೀಗ ಶೇ18ಕ್ಕೆ ಇಳಿಕೆಯಾಗಿದೆ. ಕೊಠಡಿ ಬಾಡಿಗೆ ₹7,500ಕ್ಕಿಂತ ಅಧಿಕ ಇದ್ದಾಗ ಶೇ28ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಈ ಹಿಂದೆ ಇದು ಶೇ21 ಇತ್ತು. ರೆಸ್ಟೋರೆಂಟ್ ವಿಷಯಕ್ಕೆ ಬಂದರೂ ಅಷ್ಟೇ ಕೊಠಡಿ ಬಾಡಿಗೆ ದರ ₹7500ಕ್ಕಿಂತ ಕಡಿಮೆ ಇದ್ದರೆ ಶೇ5ರಷ್ಟು ತೆರಿಗೆ ಹಾಗೂ ಅದಕ್ಕಿಂತ ಹೆಚ್ಚಿದ್ದರೆ ಶೇ18ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಸಭೆ– ಸಮಾವೇಶ ನಡೆಸುವ ಬ್ಯಾಂಕ್ವೆಟ್ ಹಾಲ್‌ಗೆ ಈ ಹಿಂದೆ ಇದ್ದ ಶೇ21 ತೆರಿಗೆ ಈಗ ಶೇ18ಕ್ಕೆ ಇಳಿಕೆಯಾಗಿದೆ.

ಜಿಎಸ್‌ಟಿ ಬಂದ ನಂತರ ಗ್ರಾಹಕರಿಗೆ ಯಾವುದೇ ರೀತಿಯ ಹೊರೆಯಾಗಿಲ್ಲ. ಬದಲಾಗಿ ಹಲವಾರು ರೀತಿಯ ಉಪಯೋಗಗಳಾಗಿವೆ. ವಿಶೇಷವಾಗಿ ಕಂಪೆನಿಯೇ ಹಣ ಪಾವತಿಸಿದರೆ ತೆರಿಗೆಯನ್ನು ಮರುಪಾವತಿ ಪಡೆಯಲು ಅವಕಾಶ ಇದೆ. ಆದ್ದರಿಂದ ಇದೊಂದು ಅತ್ಯುತ್ತಮ ತೆರಿಗೆ ಪದ್ಧತಿ ಎಂದರೂ ತಪ್ಪಿಲ್ಲ ಎನ್ನುತ್ತಾರೆ ಗೋಕುಲ್ ರಸ್ತೆಯ ಕ್ಲಾರ್ಕ್ ಇನ್ ಹೋಟೆಲ್ ಗ್ರಾಹಕ ಅದಾನಿ ಕ್ಯಾಪಿಟಲ್ ಸಂಸ್ಥೆಯ ಕ್ರೆಡಿಟ್ ಅಂಡ್ ರಿಸ್ಕ್ ವಿಭಾಗದ ಮುಖ್ಯಸ್ಥ ಶಂಕರ್.

ಹೋಟೆಲ್ ಬಿಲ್‌ಗಳನ್ನು ಕಂಪೆನಿಯೇ ಪಾವತಿ ಮಾಡುತ್ತದೆ. ಜಿಎಸ್‌ಟಿ ಬಂದ ನಂತರ ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂಬುದು ಅಶೋಕ್ ಲೈಲ್ಯಾಂಡ್ ಕಂಪೆನಿ ಪ್ರತಿನಿಧಿ ಶಕ್ತಿ ಮಣಿಕಂಠನ್ ಅಭಿಪ್ರಾಯ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !