ಬೇಡಿಕೆ ಈಡೇರಿಸುವ ಭರವಸೆ; ಉಪವಾಸ ಸತ್ಯಾಗ್ರಹ ಅಂತ್ಯ

ಅಣ್ಣಿಗೇರಿ: ಆದಿವಾಸಿ ಪಾರ್ದಿ, ಹರನಶಿಕಾರಿ ಹಾಗೂ ಗೊಲ್ಲ ಸಮುದಾಯಗಳಿಗೆ ನಿವೇಶನ ನೀಡಬೇಕು ಎಂದು ಆಗ್ರಹಿಸಿ ಸಮುದಾಯದವರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನೀಡಿದ ಭರವಸೆ ಮೇರೆಗೆ ಭಾನುವಾರ ಅಂತ್ಯಗೊಳಿಸಲಾಯಿತು.
ಸಚಿವ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿ, ‘ಆದಿವಾಸಿ ಪಾರ್ದಿ ಮತ್ತು ಇತರ ಜನಾಂಗದವರ ಸಮಸ್ಯೆ ಕುರಿತು ಮಾಹಿತಿ ಪಡೆದುಕೊಂಡು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಸರ್ಕಾರದ ನಿಯಮಾವಳಿ ಪ್ರಕಾರ ಆದಷ್ಟು ಬೇಗ ಶಾಶ್ವತ ಸೂರು ಕಲ್ಪಿಸಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.
‘ಈ ಬಗ್ಗೆ ಚರ್ಚಿಸಲು ಶೀಘ್ರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆಯಲಾಗುವುದು. ಸಮಾಜದವರು ಸಭೆಯಲ್ಲಿ ಭಾಗವಹಿಸಬೇಕು‘ ಎಂದರು.
ಮುಖಂಡ ಷಣ್ಮುಖ ಗುರಿಕಾರ ಮಾತನಾಡಿದರು. ಆದಿವಾಸಿ ಜನಾಂಗದ ಮುಖಂಡ ಧರ್ಮಣ್ಣ ಹರನಶಿಕಾರಿ, ತಹಶೀಲ್ದಾರ್ ಭ್ರಮರಾಂಬ ಗುಬ್ಬಿ ಶಟ್ಟಿ, ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ, ಪುರಸಭೆ ಸದಸ್ಯೆ ಶೋಭಾ ಗೊಲ್ಲರ, ರಾಘವೇಂದ್ರ ರಾಮಗಿರಿ, ಶಿವಾನಂದ ಹೊಸಳ್ಳಿ, ಶಿವಾನಂದ ಹಾಳದೋಟರ, ಸಿಪಿಐ ಧ್ರುವರಾಜ ಪಾಟೀಲ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.