ಗುಡಗೇರಿ: ಗ್ರಾಮದ 1008 ಶಾಂತಿನಾಥ ತೀರ್ಥಂಕರ ನೂತನ ಬಸದಿಯಲ್ಲಿ ಪಂಚ ಕಲ್ಯಾಣ ಮಹೋತ್ಸವದ 48ನೇ ದಿನದ ಸರ್ವದೋಷ ಪ್ರಾಯಶ್ಚಿತ ನಿವಾರಣೆ ಪೂಜೆ ಬುಧವಾರ ಜರುಗಿತು.

ಬಸದಿಯ ಮೂಲ ನಾಯಕನಾದ ಶಾಂತಿನಾಥ ಪಂಚಾಮೃತ ಅಭಿಷೇಕ 108 ಪ್ರಾಯಶ್ಚಿತ ಅರ್ಗ್ಯ. 108 ಕಳಶಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಪಂಚ ಕಲ್ಯಾಣ ಪ್ರತಿಷ್ಠಾಚಾರ್ಯ ಪವನ ಪಂಡಿತ, ಸ್ಥಾನಿಕ ಪಂಡಿತ ರವಿ ಕುಲಕರ್ಣಿ ನೆರವೇರಿಸಿದರು.

ಚತುರ್ಮುಖ ಜಿನಬಿಂಬಕ್ಕೆ ಶ್ರಾವಕ, ಶ್ರಾವಕಿಯರು ಕಳಶಾಭಿಷೇಕ ನೆರವೇರಿಸಿದರು. ಸಂಜೆ ಅಲಂಕೃತಗೊಂಡ ಟ್ರ್ಯಾಕ್ಟರ್ನಲ್ಲಿ ಮಹಾವೀರ ತೀರ್ಥಂಕರ ಭಾವಚಿತ್ರ, ಉತ್ಸವ ಮೂರ್ತಿ ಶಾಂತಿನಾಥ ತೀರ್ಥಂಕರನ್ನು ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ದಾರಿಯುದ್ದಕ್ಕೂ ಭಕ್ತರು ದೇವರಿಗೆ ಹಣ್ಣು ಕಾಯಿ ಅರ್ಪಿಸಿದರು. ಮೆರೆವಣಿಯಲ್ಲಿ ಬೋಲೋ ಮಹಾವೀರ ಭಗವಾನ ಕೀ ಜೈ... ಅಹಿಂಸಾ ಧರ್ಮ ಕೀ ಜೈ... ಜೈ ಘೋಷಣೆಗಳು ಮೊಳಗಿದವು. ಕಾರ್ಯಕ್ರಮದಲ್ಲಿ ಸಮಾಜದ ಪದಾಧಿಕಾರಿಗಳು, ನೂರಾರು ಶ್ರಾವಕ, ಶ್ರಾವಕಿಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-24-1492650140

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.