ಹುಬ್ಬಳ್ಳಿ: ‘ಪಕ್ಷದಲ್ಲಿರುವ ತಾವೊಬ್ಬರೇ ಕಾಯಂ ಸಚಿವರಾಗಿರಬೇಕು ಎಂದೇನಿಲ್ಲ. ಸಾಕಷ್ಟು ಮಂದಿ ಹಿರಿಯರು, ಅನುಭವಿಗಳೂ ಇದ್ದಾರೆ. ಅವರಿಗೂ ಅವಕಾಶ ದೊರೆಯಬೇಕು’ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅಭಿಪ್ರಾಯಪಟ್ಟರು.

‘ರಾಜ್ಯದಲ್ಲಿ ಸರ್ಕಾರ ಬಂದು ಈಗಾಗಲೇ ಮೂರು ವರ್ಷ ಸಮೀಪಿಸುತ್ತಿದೆ. ಸಚಿವ ಸಂಪುಟ ಪುನರ್ ರಚನೆಯಾಗಿ, ಉಳಿದವರಿಗೂ ಅಲ್ಲಿ ಅವಕಾಶ ಸಿಗಬೇಕು. ಈ ಕುರಿತು ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಸೂಕ್ತ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದ್ದು, ಶೀಘ್ರದಲ್ಲಿಯೇ ಜಾರಿಗೆಯೂ ಬರಲಿದೆ’ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ಸಚಿವ ಸ್ಥಾನ ಕಳೆದುಕೊಳ್ಳುವವರು ಅವಮಾನ ಎಂದು ಭಾವಿಸಬಾರದು. ಎಲ್ಲರಿಗೂ ಅವಕಾಶ ಸಿಗಬೇಕು ಎನ್ನುವ ದೊಡ್ಡತನ ಇಟ್ಟುಕೊಂಡಿರಬೇಕು. ನಾವೆಲ್ಲ ಪಕ್ಷದ ಶಿಸ್ತಿನ ಸಿಫಾಯಿಗಳಾಗಿದ್ದು, ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವನ್ನು ಮುಕ್ತವಾಗಿ ಒಪ್ಪಿಕೊಳ್ಳುತ್ತೇವೆ’ ಎಂದರು.

‘ಅಧಿಕಾರ ಹಂಚಿಕೆ ತೀರ್ಮಾನ ಹೈಕಮಾಂಡ್ ಅಂಗಳದಲ್ಲಿದ್ದು, ಅವರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಆ ತೀರ್ಮಾನಕ್ಕೆ ಡಿಸಿಎಂ, ಸಚಿವರು ಹಾಗೂ ಶಾಸಕರು ಬದ್ಧರಾಗಿರುತ್ತಾರೆ. ಬೇರೆ ಯಾರೂ ಮಧ್ಯಪ್ರವೇಶಿಸುವ ಅಗತ್ಯವಿಲ್ಲ’ ಎಂದು ಹೇಳಿದರು.

‘ಪಕ್ಷದಲ್ಲಿ ಗೊಂದಲವಿದೆ’ ಎನ್ನುವ ಸಚಿವ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಗುಂಡೂರಾವ್, ‘ನಮ್ಮಲ್ಲಿ ಗೊಂದಲವಿಲ್ಲ. ಒಳಮೀಸಲಾತಿ ಕುರಿತು ತೆಗೆದುಕೊಂಡಿರುವ ತೀರ್ಮಾನಕ್ಕೆ ಎಲ್ಲ ಸಚಿವರೂ ಒಪ್ಪಿಗೆ ನೀಡಿದ್ದಾರೆ. ನಾವೆಲ್ಲ ಜೊತೆಯಾಗಿ ಇದ್ದೇವೆ ಎನ್ನಲು ಇದು ಸಾಕ್ಷಿಯಾಗಿದ್ದು, ಎಲ್ಲರೂ ಒಗ್ಗೂಡಿ ಹೋಗುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.