ಧಾರವಾಡ: ‘ಮಾತೋಶ್ರೀ ಸುವರ್ಣಮ್ಮ ರಾಜಶೇಖರಪ್ಪ ಕುಲಕರ್ಣಿ ಅವರ ಸ್ಮರಣೆ ಅಂಗವಾಗಿ ನಗರದ ಅಕ್ಕನ ಬಳಗವು ನೀಡುವ ಅಕ್ಕ ಪ್ರಶಸ್ತಿಗೆ ಸಮಾಜ ಸೇವಕಿ ಗುರಮ್ಮ ಪಂಪಯ್ಯ ಸಂಕಿನಮಠ ಆಯ್ಕೆಯಾಗಿದ್ದಾರೆ’ ಎಂದು ಬಳಗದ ಅಧ್ಯಕ್ಷೆ ಗೌರಮ್ಮ ನ್ಯಾಮತಿ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಶಸ್ತಿಯು ₹10 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ. ಮಾರ್ಚ್ 21 ರಂದು ಬೆಳಿಗ್ಗೆ 10 ಗಂಟೆಗೆ ಅಕ್ಕನ ಬಳಗದ ಮೃತ್ಯುಂಜಯ ಅಪ್ಪಗಳ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ಸ್ನೇಹಲ್ ಆರ್., ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಪಾಲ್ಗೊಳ್ಳುವರು’ ಎಂದು ತಿಳಿಸಿದರು.

ಪ್ರೇಮಾ ಸಂಗೊಂದಿಮಠ, ಅನಸೂಯಾ ಜವಳಿ, ಮೀನಾಕ್ಷಿ ಕೋಟೂರ, ನಳಿನಾಕ್ಷಿ ಅರಳಿಗುಪ್ಪಿ, ನಿರ್ಮಲಾ ಗೆಜ್ಜೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.