‘ನಿಸ್ವಾರ್ಥ ಸೇವೆಯ ಪ್ರತೀಕ ಸಾಯಿ ಬಾಬಾ’

ಸೋಮವಾರ, ಜೂಲೈ 22, 2019
27 °C

‘ನಿಸ್ವಾರ್ಥ ಸೇವೆಯ ಪ್ರತೀಕ ಸಾಯಿ ಬಾಬಾ’

Published:
Updated:
Prajavani

ಹುಬ್ಬಳ್ಳಿ: ನಗರದ ಹಳೇ ಕೋರ್ಟ್‌ ವೃತ್ತದಲ್ಲಿರುವ ಸಾಯಿ ಮಂದಿರದಲ್ಲಿ ಮಂಗಳವಾರ ಗುರುಪೂರ್ಣಿಮಾ ಉತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಉತ್ಸವ ಉದ್ಘಾಟಿಸಿ ಮಾತನಾಡಿದ ಉಣಕಲ್ಲಿನ ಶಿರಡಿ ಸಾಯಿ ಮಹಾ ಮಂಡಳಿಯ ಅಧ್ಯಕ್ಷರಾದ ವಿಶ್ವನಾಥ ತ್ರಿಮಲ್ಲೆ, ‘ಸಾಯಿ ಬಾಬಾ ಅವರು ನಿಸ್ವಾರ್ಥ ಸೇವೆಯ ಪ್ರತೀಕವಾಗಿದ್ದಾರೆ. ಅವರಲ್ಲಿ ನಂಬಿಕೆ ಇಟ್ಟು ಒಳ್ಳೆಯ ಕೆಲಸ ಮಾಡಿದರೆ ಯಶಸ್ಸು ಸಿಗಲಿದೆ’ ಎಂದರು.

‘ಮನುಷ್ಯ ಅತಿಯಾಗಿ ಆಸೆಪಡದೆ ಮಿತಿಯೊಳಗೆ ಬದುಕು ದೂಡಬೇಕು. ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು. ಇದರಿಂದ ಮತ್ತೊಬ್ಬರಿಗೆ ಆಸರೆಯಾಗುವುದಲ್ಲದೆ, ದಾನ ಮಾಡಿದವರಿಗೂ ಒಂದು ರೀತಿಯ ನೆಮ್ಮದಿ ಸಿಗುತ್ತದೆ’ ಎಂದು ಹೇಳಿದರು.

ಶಿರಡಿ ಸಾಯಿ ಸದ್ಭಕ್ತ ಮಂಡಳಿಯ ಅಧ್ಯಕ್ಷ ಡಾ. ಟಿ.ಎಸ್. ಮೋಹನಕುಮಾರ ಮಾತನಾಡಿ, ‘ಭಕ್ತರಿಂದಾಗಿ ಸಾಯಿ ಮಂದಿರದಲ್ಲಿ ಬಾಬಾರಿಗೆ ನಿತ್ಯ ಸೇವಾ ಕೈಂಕರ್ಯಗಳು ನೆರವೇರುತ್ತಿವೆ. ಗುರುಪೂರ್ಣಿಮಾ ಉತ್ಸವದ ನಿಮಿತ್ತ ಜುಲೈ 10ರಿಂದ 16ರವರೆಗೆ ‘ಶ್ರೀ ಸಾಯಿ ದಿವ್ಯ ಚರಿತ್ರೆ ಪಾರಾಯಣ ಪಠಣ’ ಕಾರ್ಯಕ್ರಮ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಾಬಾರ ಕೃಪೆಗೆ ಪಾತ್ರವಾಗಬೇಕು’ ಎಂದು ಮನವಿ ಮಾಡಿದರು.

ಗುರುಪೂರ್ಣಿಮಾ ಉತ್ಸವ ಸಮಿತಿ ಉಸ್ತುವಾರಿ ಅಧ್ಯಕ್ಷ ಹಾಗೂ ಸಾಯಿ ಸದ್ಭಕ್ತ ಮಂಡಳಿಯ ನಿರ್ದೇಶಕರಾದ ನರಸಿಂಗಸಾ ಆರ್‌. ರತನ, ಗಣೇಶ, ಎಂ. ಮ್ಯಾಗೇರಿ ಹಾಗೂ ನಾರಾಯಣ ಜಿ. ಕಾಟಿಗರ ಇದ್ದರು. ರಾಜು ಬೋಂಗಾಳೆ ನಿರೂಪಣೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !