ಬೈಲಹೊಂಗಲ: ‘ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯದು. ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ’ ಎಂದು ನಿವೃತ್ತ ಶಿಕ್ಷಕ ಎಂ.ಎಸ್.ಮಾಳಿ ಹೇಳಿದರು.
ಪಟ್ಟಣದ ವಿಜಯ ಸೋಷಿಯಲ್ ಕ್ಲಬ್ ಆವರಣದಲ್ಲಿ ಭಾನುವಾರ ನಡೆದ ಎಂಸ್ಸೆಸ್ಸೆಆರ್ ಹಾಗೂ ಎಂಕೆಸಿಆರ್ ಪ್ರೌಢಶಾಲೆಯ 1998–99ನೇ ಸಾಲಿನ ಎಸ್ಸೆಎಸ್ಸೆಲ್ಸಿ ವಿದ್ಯಾರ್ಥಿಗಳ ಸ್ನೇಹಕೂಟ ಹಾಗೂ ಗುರುವಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಜೀವನದಲ್ಲಿ ಗುರಿ, ಛಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ’ ಎಂದರು.
ಗಣಿತ ಶಿಕ್ಷಕ ಈಶ್ವರ ಹೋಟಿ, ಮುಖ್ಯ ಶಿಕ್ಷಕ ಎಂ.ಸಿ.ಹಂಗರಕಿ, ನಿವೃತ್ತ ಶಿಕ್ಷಕರಾದ ಬಿ.ವೈ. ಭರಮಣ್ಣವರ, ವಿ.ವಿ.ಜೋಶಿ, ಆರ್.ಬಿ.ಪಾರಿಶ್ವಾಡ ಮಾತನಾಡಿದರು.
ನಿವೃತ್ತ ಶಿಕ್ಷಕರಾದ ಎನ್.ಎಚ್.ಕುಲಕರ್ಣಿ, ಎನ್.ಎಚ್. ಅಂಗಡಿ, ಎಸ್.ಆರ್.ಕೊಳೇಕರ, ಎಸ್.ಬಿ.ಹೊಸಮನಿ, ಎಸ್.ಎಸ್. ಬಳಿಗಾರ, ಆರ್.ಯು.ಹೊಂಗಲಮಠ, ಜಿ.ಎಸ್.ಕರ್ಕಿ, ಎಂ.ಎ. ಆಲೂರ, ಎಂ.ಐ.ಆನಿಕಿವಿ, ವಿ.ಎಫ್.ಹೊಸೂರ, ಬಿ.ಬಿ. ನರಸಣ್ಣವರ, ಎನ್.ಐ.ಬಡಿಗೇರ, ಎಸ್.ಬಿ.ಬೋರಕನವರ, ಎಂ.ವಿ. ನಾಗನೂರ, ಯು.ಎಂ.ತುರಮರಿ, ಡಿ.ಎ. ಮಿರಜಕರ, ಬಿ.ಪಿ.ಹಲಸಗಿ, ಎಂ.ವಿ.ಕುಲಕರ್ಣಿ, ಟಿ.ಎಸ್.ಬಾಗೇವಾಡಿ, ಎಸ್.ಎಸ್.ಉಡಿಕೇರಿ ಅವರನ್ನು ಸನ್ಮಾನಿಸಲಾಯಿತು.
ಹಳೆಯ ವಿದ್ಯಾರ್ಥಿಗಳಾದ ವಿಶ್ವನಾಥ ಮಾವಿನಕಟ್ಟಿ, ಬಿ.ಎಸ್. ಜಹಗೀರದಾರ, ಸಂದೀಪ ಕುಲಕರ್ಣಿ, ಮಂಜುಳಾ ಚಲವಾದಿ ಅನಿಸಿಕೆ ಹಂಚಿಕೊಂಡರು.
ಹಳೆಯ ವಿದ್ಯಾರ್ಥಿ ರಾಮಕೃಷ್ಣ ಕಟ್ಟಿಮನಿ ತಮ್ಮ ಕಂಪನಿಯಿಂದ ಶಾಲೆಗೆ ಪ್ರತಿ ತಿಂಗಳು ₹10 ಸಾವಿರ ಕೊಡುವ ಘೋಷಣೆ ಮಾಡಿದರು. ರಾಜು ಹೊಸಮನಿ ₹10 ಸಾವಿರ ದೇಣಿಗೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.