ಹನುಮ ಜಯಂತಿ ಮೆರವಣಿಗೆ 19ಕ್ಕೆ

ಮಂಗಳವಾರ, ಏಪ್ರಿಲ್ 23, 2019
29 °C

ಹನುಮ ಜಯಂತಿ ಮೆರವಣಿಗೆ 19ಕ್ಕೆ

Published:
Updated:

ಹುಬ್ಬಳ್ಳಿ: ನಗರದ ಎಸ್‌.ಎಸ್‌.ಕೆ. ಯುವಕರ ಸಂಘ, ಹನುಮ ಜಯಂತಿ ಅಂಗವಾಗಿ ಏ. 19ರಂದು ಸಂಜೆ 4 ಗಂಟೆಯಿಂದ ದಾಜೀಬಾನ ಪೇಟೆಯಲ್ಲಿರುವ ತುಳಜಾಭವಾನಿ ದೇವಸ್ಥಾನದಿಂದ ಮೆರವಣಿಗೆ ಹಮ್ಮಿಕೊಂಡಿದೆ.

ಸಂಘದ ಅಧ್ಯಕ್ಷ ಪ್ರಕಾಶ ಎಂ. ಬುರಬುರೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಪ್ರತಿ ವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ಮೆರವಣಿಗೆ ನಡೆಯಲಿದೆ. ಏಳು ಅಡಿ ಎತ್ತರದ ಹನುಮನ ಮೂರ್ತಿ ಮೆರವಣಿಗೆ ಮಾಡಲಾಗುತ್ತದೆ’ ಎಂದರು.

ಎಸ್‌.ಎಸ್‌.ಕೆ. ತುಳಜಾಭವಾನಿ ದೇವಸ್ಥಾನ ಕೇಂದ್ರ ಪಂಚಸಮಿತಿ ಗೌರವ ಕಾರ್ಯದರ್ಶಿ ಕಿಶೋರ ಆರ್‌. ಜಿತೂರಿ ‘ಮೆರವಣಿಗೆಯು ಮ್ಯಾದಾರ ಓಣಿ, ದುರ್ಗದ ಬೈಲ್‌, ನ್ಯೂ ಮೈಸೂರು ಸ್ಟೋರ್‌, ಪೆಂಡಾರ್‌ ಗಲ್ಲಿ, ಮಹಾವೀರ ಓಣಿ, ಕಮರಿಪೇಟೆ, ಬೋಗಾರ ಓಣಿ, ಮೂರು ಸಾವಿರ ಮಠದ ಮೂಲಕ ಮರಳಿ ದೇವಸ್ಥಾನಕ್ಕೆ ಮರಳಲಿದೆ. ಎಲ್ಲ ಸಮಾಜದ ಭಕ್ತಾದಿಗಳು ಮೆರವಣಿಗೆಯಲ್ಲಿ ಭಾಗವಹಿಸಬೇಕು’  ಎಂದು ಮನವಿ ಮಾಡಿದರು.

ಸಮಾಜದ ಮುಖಂಡರಾದ ವಿನಾಯಕ ಮೆರವಾಡಿ, ದೇವದಾಸ ಎಚ್‌. ಹಬೀಬ, ಲಕ್ಷ್ಮಣ ದಲಬಂಜನ, ವಿಠ್ಠಲ ಲದ್ವಾ, ಹನುಮಂತನಾ ನಿರಂಜನ, ರಘು ಪವಾರ್‌, ಆನಂದ ಬದ್ದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !