ಸೋಮವಾರ, ಮೇ 23, 2022
28 °C
ಕ್ರಿಕೆಟ್‌: ಎಸ್‌ಡಿಎಂಗೆ ಸೋಲು, ವಿಎಂಸಿಎ ತಂಡಕ್ಕೆ ಸೆಮಿಫೈನಲ್‌ ಅದೃಷ್ಟ

ಎಚ್‌ಸಿಎ–ಹುಬ್ಬಳ್ಳಿ ಕೋಲ್ಟ್ಸ್‌ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಿರ್ಣಾಯಕ ಪಂದ್ಯದಲ್ಲಿ ಚುರುಕಿನ ಬೌಲಿಂಗ್ ಮಾಡಿದ ಹುಬ್ಬಳ್ಳಿ ಕೋಲ್ಟ್ಸ್‌ ತಂಡ 16 ವರ್ಷದ ಒಳಗಿನವರ ‘ಪಿಆರ್‌ಎನ್‌’ ಟ್ರೋಫಿ ಅಂತರ ಕ್ಯಾಂಪ್‌ಗಳ ಆಹ್ವಾನಿತ ಕ್ರಿಕೆಟ್ ಟೂರ್ನಿಯಲ್ಲಿ ನಾಕೌಟ್‌ ಹಂತ ಪ್ರವೇಶಿಸಿತು. ಶುಕ್ರವಾರ ನಡೆಯುವ ತಲಾ 50 ಓವರ್‌ಗಳ ಸೆಮಿಫೈನಲ್‌ನಲ್ಲಿ ಈ ತಂಡ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ ಎದುರು ಪೈಪೋಟಿ ನಡೆಸಲಿದೆ.

ರೈಲ್ವೆ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗುರುವಾರ ಮೊದಲು ಬ್ಯಾಟ್‌ ಮಾಡಿದ ಕೋಲ್ಟ್ಸ್‌ ತಂಡ 30 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 136 ರನ್‌ ಕಲೆಹಾಕಿತು. ಪ್ರಥಮ್ ಬೋಸ್ಲೆ (64) ಅರ್ಧಶತಕ ಇದಕ್ಕೆ ಕಾರಣವಾಯಿತು. ಗುರಿ ಬೆನ್ನು ಹತ್ತಿದ ಎದುರಾಳಿ ಫಸ್ಟ್ ಕ್ರಿಕೆಟ್‌ ಅಕಾಡೆಮಿ 27.1 ಓವರ್‌ಗಳಲ್ಲಿ 110 ರನ್‌ ಗಳಿಸಿ ತನ್ನ ಹೋರಾಟ ಮುಗಿಸಿತು. ಎಲ್‌. ಪ್ರಥಮ್‌ ಮೂರು, ಎಸ್‌. ಸಂಕೇತ್ ಮತ್ತು ಕೆ. ಶಾಹೀದ್‌ ತಲಾ ಎರಡು ವಿಕೆಟ್‌ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಆದಿತ್ಯ ಉಮ್ರಾಣಿ (65) ಅರ್ಧಶತಕದ ಬಲದಿಂದ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ 30 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 195 ರನ್‌ ಗಳಿಸಿ ಎದುರಾಳಿ ಧಾರವಾಡದ ಎಸ್‌ಡಿಎಂ ಅಕಾಡೆಮಿ ತಂಡವನ್ನು 19.2 ಓವರ್‌ಗಳಲ್ಲಿ 61 ರನ್‌ಗೆ ಆಲೌಟ್‌ ಮಾಡಿತು. ಇದರಿಂದ ‘ಎ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಸೆಮಿಫೈನಲ್‌ ಪ್ರವೇಶಿಸಲು ಎಸ್‌ಡಿಎಂ ಈ ಪಂದ್ಯದಲ್ಲಿ ಗೆಲ್ಲಲೇಬೇಕಿತ್ತು. ಎಸ್‌ಡಿಎಂ ಹಾಗೂ ಧಾರವಾಡದ ವಿಎಂಸಿಎ ತಂಡಗಳು ತಲಾ ಎರಡು ಪಾಯಿಂಟ್‌ಗಳನ್ನು ಹೊಂದಿದ್ದವು. ರನ್‌ರೇಟ್‌ ಆಧಾರದ ಮೇಲೆ ವಿಎಂಸಿಎ ಸೆಮಿಫೈನಲ್‌ ಅದೃಷ್ಟ ಪಡೆದುಕೊಂಡಿತು.

ಪಂದ್ಯ ಆರಂಭ: ಬೆಳಿಗ್ಗೆ 9.30.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.