ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ನೈರುತ್ಯ ರೈಲ್ವೆ ತಂಡಕ್ಕೆ ಪ್ರಶಸ್ತಿ

Last Updated 23 ಫೆಬ್ರುವರಿ 2021, 1:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೈರುತ್ಯ ರೈಲ್ವೆ ತಂಡ, ನಗರದ ಫ್ರೆಂಡ್ಸ್‌ ಸರ್ಕಲ್‌ ಸೆಟ್ಲಮೆಂಟ್‌ಹಾಕಿಸಮಿತಿ ಆಯೋಜಿಸಿದ್ದ ‘7ಎ‘ ಸೈಡ್‌ ‘ಸೆಟ್ಲಮೆಂಟ್ ಕಪ್‌’ ಹಾಕಿಟೂರ್ನಿಯಲ್ಲಿ ಚಾಂಪಿಯನ್‌ ಆಯಿತು.

ಫೈನಲ್‌ನಲ್ಲಿ ರೈಲ್ವೆ ತಂಡ 1–0 ಗೋಲಿನಿಂದ ಬಳ್ಳಾರಿ ಜಿಲ್ಲಾ ತಂಡವನ್ನು ಮಣಿಸಿತು. ವೀರಣ್ಣ ಗೋಲು ಗಳಿಸಿ ಗೆಲುವಿನ ರೂವಾರಿ ಎನಿಸಿದರು. ಚಾಂಪಿಯನ್ ತಂಡಕ್ಕೆ ₹15 ಸಾವಿರ ಹಾಗೂ ರನ್ನರ್ಸ್‌ ಅಪ್‌ ತಂಡಕ್ಕೆ ₹10 ಸಾವಿರ ಬಹುಮಾನ ಲಭಿಸಿತು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ನೈರುತ್ಯ ರೈಲ್ವೆ ತಂಡ 1–0 ಗೋಲಿನಿಂದಬೆಂಗಳೂರಿನ ಡಿವೈಇಎಸ್ ವಿರುದ್ಧ ಗೆಲುವು ಸಾಧಿಸಿತು. ನಿಗದಿತ ಅವಧಿ ಪೂರ್ಣಗೊಂಡಾಗ ಉಭಯ ತಂಡಗಳು ಗೋಲು ದಾಖಲಿಸಿರಲಿಲ್ಲ. ಆದ್ದರಿಂದ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಆಗ ರೈಲ್ವೆ ತಂಡ ಗೆಲುವಿನ ನಗು ಬೀರಿತು.ಇನ್ನೊಂದು ಪಂದ್ಯದಲ್ಲಿ ಬಳ್ಳಾರಿ ತಂಡ 1–0 ಗೋಲಿನಿಂದ ಹುಬ್ಬಳ್ಳಿಯಯಂಗ್‌ ಸ್ಟರ್ಸ್‌ ಸ್ಪೋರ್ಟ್ಸ್‌ ಕ್ಲಬ್‌ (ವೈಎಸ್‌ಎಸ್‌ಸಿ) ಎದುರು ಜಯ ಸಾಧಿಸಿತು.‌

ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದಬಳ್ಳಾರಿ ತಂಡದ ಹರೀಶ ಮುಟಗಾರ, ಡಿವೈಇಎಸ್‌ ತಂಡದ ಜಯವಂತ, ಹುಬ್ಬಳ್ಳಿ ಹಾಕಿ ಅಕಾಡೆಮಿ (ಎಚ್‌ಎಚ್ಎ) ಪವನ ದೊಡ್ಡಮನಿ, ವಿವೇಕ ಭಾಗಡಿ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದರು.

ಅತಿಥಿಯಾಗಿ ಬಂದಿದ್ದ ಎಸಿಪಿ ವಿನೋದ ಮುಕ್ತೇದಾರ ಪ್ರಶಸ್ತಿ ಪ್ರದಾನ ಮಾಡಿದರು.ವೈಎಸ್‌ಎಸ್‌ಸಿ ಕ್ಲಬ್‌ ಅಧ್ಯಕ್ಷ ಯಮನೂರು ಗುಡಿಹಾರ, ರೈಲ್ವೆ ಯೂನಿಯನ್‌ನ ಮುಖಂಡ ಸುಭಾನಿ ಮಲ್ಲಾಡ, ಎಚ್‌ಎಚ್ಎ ಕಾರ್ಯದರ್ಶಿಬಾಲರಾಜ ಹಲಕುರ್ಗಿ, ಪೊಲೀಸ್‌ ಸಿಬ್ಬಂದಿ ದೇವು ಭಜಂತ್ರಿ, ಯಲ್ಲಪ್ಪ ಕೊರವರ, ಶಂಕರ ಬಿಜವಾಡ,ಪ್ರವೀಣ ಇಂದರಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT