ನಾಲತವಾಡ: ಸಮೀಪದ ಬಿಜ್ಜೂರ ಗ್ರಾಮದಲ್ಲಿ ನನ್ನ ಮಣ್ಣು, ನನ್ನ ದೇಶದ ಅಭಿಯಾನದಡಿ ಮಣ್ಣು ಸಂಗ್ರಹಣೆ ಹಾಗೂ ಅಕ್ಕಿ ಸಂಗ್ರಹಣೆ ಕಾರ್ಯ ಜರುಗಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಮುದ್ದೇಬಿಹಾಳ ಸಂಯುಕ್ತಾಶ್ರಯದಲ್ಲಿ ಅಜಾದಿ ಕಾ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಅಭಿಯಾನದದಲ್ಲಿ ಗ್ರಾ.ಪಂ ಮಟ್ಟದಿಂದ ಮಣ್ಣು ಸಂಗ್ರಹಿಸಲು ಸರ್ಕಾರಗಳ ನಿರ್ದೇಶನದಂತೆ ಮಂಗಳವಾರ ಬಿಜ್ಜೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಜ್ಜೂರ, ಲೊಟಗೇರಿ, ಸುಲ್ತಾನಪೂರ, ಘಾಳಪೂಜಿ, ಚಿಕ್ಕಬಿಜ್ಜೂರ, ಖಾನಾಪೂರ ಗ್ರಾಮಗಳಿಂದ ತರಲಾದ ಮಣ್ಣು ಹಾಗೂ ಅಕ್ಕಿಯನ್ನು ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ಎರಡು ಕಳಸದಲ್ಲಿ ಸಂಗ್ರಹಿಸಲಾಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣ ರಬ್ಲರ್ ಮಾತನಾಡಿ, ನಮ್ಮ ತಾಲ್ಲೂಕಿನ ಎಲ್ಲಾ ಗ್ರಾ.ಪಂ. ಗಳಿಂದ ಸಂಗ್ರಹಿಸಲಾದ ಮಣ್ಣನ್ನು ರಾಷ್ಟ್ರದ ರಾಜಧಾನಿಯಾದ ನವದೆಹಲಿಗೆ ನಮ್ಮ ದೇಶಕ್ಕಾಗಿ ಶ್ರಮಿಸಿದ, ತ್ಯಾಗ ಮತ್ತು ಬಲಿದಾನವಾದ ವ್ಯಕ್ತಿಗಳ ಸ್ಮರಣೆಗಾಗಿ ಈ ಮಣ್ಣನ್ನು ರಾಷ್ಟ್ರದ ರಾಜಧಾನಿಯಲ್ಲಿ ಯುನೀಕ್ ಪವಿತ್ರವಾದ ಉದ್ಯಾನ ವನ ನಿರ್ಮಿಸಲು ಉಪಯೋಗಿಸುವುದಕ್ಕಾಗಿ ಕಳುಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.
ಗ್ರಾ.ಪಂ ಉಪಾಧ್ಯಕ್ಷ ಲಕ್ಷ್ಮಣ ರಬ್ಲರ್ ಸಿಬ್ಬಂದಿ ಯಮನಪ್ಪ ಜಗ್ಲರ್, ಮಲ್ಲಪ್ಪ ಸುಳಿಬಾವಿ, ಗ್ರಂಥಪಾಲಕರ ಎನ್.ಬಿ. ಪಾಟೀಲ, ಹುಲಗಪ್ಪ ಮಾದರ, ಶಿವಪ್ಪ ಚಲವಾದಿ, ಗಂಗಪ್ಪ ಚಲವಾದಿ, ಮಲ್ಲಪ್ಪ ಬಾಚಿಹಾಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.