ಶುಕ್ರವಾರ, ಸೆಪ್ಟೆಂಬರ್ 20, 2019
22 °C
ಎಚ್‌ಪಿಎಲ್‌ ಜೂನಿಯರ್ ಕ್ರಿಕೆಟ್‌ ಟೂರ್ನಿ

ರಿಷಿಕೇಶ್ ಶತಕ; ಡ್ರೀಮ್ಸ್‌ ಜಯಭೇರಿ

Published:
Updated:

ಹುಬ್ಬಳ್ಳಿ: ರಿಷಿಕೇಶ್ ರಜಪೂತ್‌ (118, 72ಎಸೆತ, 17 ಬೌಂಡರಿ, 2 ಸಿಕ್ಸರ್‌) ಭರ್ಜರಿ ಬ್ಯಾಟಿಂಗ್ ಬಲದಿಂದ ಎಲೀಟ್‌ ಡ್ರೀಮ್ಸ್ ತಂಡ ಜೂನಿಯರ್‌ ಹುಬ್ಬಳ್ಳಿ ಪ್ರೀಮಿಯರ್‌ ಲೀಗ್‌ (ಎಚ್‌ಪಿಎಲ್‌) ಕ್ರಿಕೆಟ್‌ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ 64 ರನ್‌ಗಳ ಭರ್ಜರಿ ಗೆಲುವು ಪಡೆಯಿತು.

ಬಿ.ಜಿ. ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಡ್ರೀಮ್ಸ್‌ ತಂಡ 30 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 365 ರನ್‌ ಕಲೆಹಾಕಿತು. ಮ್ಯಾಥ್ಯೂ ನಿಲೂಗಲ್‌ (29), ಶತಕ ಎಸ್‌. ಗುಂಜಾಳ (27) ಮತ್ತು ಎಂ.ಎಸ್‌. ಮನೀಷ (47) ಅವರ ಉತ್ತಮ ಬ್ಯಾಟಿಂಗ್ ಇದಕ್ಕೆ ಕಾರಣವಾಯಿತು.

ಎದುರಾಳಿ ಯುನೈಟೆಡ್‌ ಭಟ್ಕಳ ತಂಡ ನಿಗದಿತ ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ ನಷ್ಟಕ್ಕೆ 201 ರನ್ ಗಳಿಸಲಷ್ಟೇ ಶಕ್ತವಾಯಿತು. ದೀಪಕ್‌ ಸಿ. ನೀರಲಗಿ (38ಕ್ಕೆ3), ಶತಕ ಗುಂಜಾಳ (46ಕ್ಕೆ2) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ ಟೈಗರ್ಸ್‌ 30 ಓವರ್‌ಗಳಲ್ಲಿ ಎಂಟು ವಿಕೆಟ್‌ ನಷ್ಟಕ್ಕೆ 123 ರನ್ ಗಳಿಸಿತು. ಅನೀಶ ಭೂಸದ 48 ರನ್‌ ಹೊಡೆದು ತಂಡದ ಗರಿಷ್ಠ ಸ್ಕೋರರ್‌ ಎನಿಸಿದರು.

ಎದುರಾಳಿ ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ನ ಯಶ್ ಹವಾಲನಾಚೆ ಮೂರು, ತನಿಷ್ಕ ನಾಯ್ಕ ಎರಡು ವಿಕೆಟ್‌ ಪಡೆದರು. ಈ ತಂಡದವರು ಸುಲಭ ಗುರಿಯನ್ನು 26.4 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಮುಟ್ಟಿ ಆರು ವಿಕೆಟ್‌ಗಳ ಗೆಲುವು ತಮ್ಮದಾಗಿಸಿಕೊಂಡರು. ಸುದೀಪ ಎಸ್‌. ಸತೇರಿ ಅರ್ಧಶತಕ ಗಳಿಸಿ ಜಯದ ಹಾದಿ ಸುಲಭ ಮಾಡಿದರು.

ಸೋಮವಾರ ನಡೆದಿದ್ದ ಪಂದ್ಯಗಳಲ್ಲಿ ಯುನೈಟೆಡ್‌ ಭಟ್ಕಳ ತಂಡ ಡ್ರಾಪಿನ್‌ ವಾರಿಯರ್ಸ್‌ ಮೇಲೂ, ವಿ.ಕೆ. ವಾರಿಯರ್ಸ್‌ ವಿರುದ್ಧವ ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ ತಂಡಗಳು ಗೆಲುವು ಸಾಧಿಸಿದವು.

Post Comments (+)