ಬುಧವಾರ, ಜನವರಿ 22, 2020
27 °C

ಹುಬ್ಬಳ್ಳಿ–ಅಂಬೆವಾಡಿ ವಿಶೇಷ ರೈಲು ಸಂಚಾರ 13ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಹುಬ್ಬಳ್ಳಿ-ಅಂಬೆವಾಡಿ-ಹುಬ್ಬಳ್ಳಿ ನಡುವೆ ಜನಸಾಧರಣ್‌ ವಿಶೇಷ ಪ್ಯಾಸೆಂಜರ್ (06929/06930) ರೈಲನ್ನು ಡಿ.13ರಿಂದ ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.

ಪ್ರತಿದಿನ ಹುಬ್ಬಳ್ಳಿಯಿಂದ ಬೆಳಿಗ್ಗೆ 5ಕ್ಕೆ ಹೊರಟು 7.25ಕ್ಕೆ ಅಂಬೆವಾಡಿ ತಲುಪಲಿದೆ. ಸಂಜೆ 7.50ಕ್ಕೆ ಅಂಬೆವಾಡಿಯಿಂದ ಹೊರಟು ರಾತ್ರಿ 10.45ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ.

ಸಮಯ ಬದಲಾವಣೆ:

ಧಾರವಾಡ - ಅಂಬೆವಾಡಿ - ಧಾರವಾಡ ನಡುವೆ ಪ್ರಸ್ತುತ ಸಂಚರಿಸುವ ರೈಲಿನ (56923/56924) ವೇಳಾಪಟ್ಟಿಯನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಡಿ.13ರಿಂದ ಪರಿಷ್ಕರಿಸಲಾಗಿದೆ.

ಧಾರವಾಡದಿಂದ ಸಂಜೆ 5.30ಕ್ಕೆ ಹೊರಟು ಸಂಜೆ 7ಕ್ಕೆ ಅಂಬೆವಾಡಿ ತಲುಪಲಿದೆ. ಅಂಬೆವಾಡಿಯಿಂದ ರಾತ್ರಿ 8 ಗಂಟೆಗೆ ಹೊರಟು ರಾತ್ರಿ 9.45ಕ್ಕೆ ಧಾರವಾಡಕ್ಕೆ ಬರಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)