ಹುಬ್ಬಳ್ಳಿ: ಯಾತ್ರಿ, ಓಲಾ, ಉಬರ್ ಕಂಪನಿಯ ವಾಹನಗಳಿಗೆ ನಗರದಲ್ಲಿ ಸಂಚಾರಕ್ಕೆ ಅವಕಾಶ ನೀಡಬಾರದು. ₹30 ಇದ್ದ ಮೀಟರ್ ದರ, ಹೆಚ್ಚಳ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉತ್ತರ ಕರ್ನಾಟಕ ಆಟೊ ರಿಕ್ಷಾ ಚಾಲಕರ ಸಂಘ ಆಗ್ರಹಿಸಿದೆ. ಈ ಕುರಿತು ನವನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದೆ.

ಎಲ್ಪಿಜಿ ಬಂಕ್ನಲ್ಲಿ ಹೆಚ್ಚಿನ ದರಕ್ಕೆ ಎಲ್ಪಿಜಿ ಮಾರಾಟ ಮಾಡುತ್ತಿರುವುದರಿಂದ ಆಟೊ ಚಾಲಕ, ಮಾಲೀಕರ ಬದುಕು ಸಂಕಷ್ಟದಲ್ಲಿದೆ. ತೈಲ ಬೆಲೆ ಏರಿಕೆಯೂ ಮತ್ತಷ್ಟು ಸಮಸ್ಯೆ ಉಂಟು ಮಾಡುತ್ತಿದ್ದು, ಆಟೊ ಚಾಲಕರ ಕುಟುಂಬ ಬೀದಿಗೆ ಬರುವಂತಾಗಿದೆ. ತಕ್ಷಣ ಅವರ ನೆರವಿಗೆ ಬರಬೇಕು ಎಂದು ಸಂಘದ ಸದಸ್ಯರು ವಿನಂತಿಸಿಕೊಂಡರು.

‘ಆಟೊ ಪರವಾನಗಿ ಮುಗಿದ ನಂತರ ನವೀಕರಣ ಮಾಡಲು ಪ್ರತಿ ತಿಂಗಳು ₹50 ದಂಡ ವಿಧಿಸುತ್ತಿದ್ದು, ಕೈ ಬಿಡಬೇಕು. ಧಾರವಾಡ ಪ್ರಾದೇಶಿಕ ಕಚೇರಿಯ ಕೌಂಟರ್ ಎದುರು ಚಾವಣಿ ನಿರ್ಮಿಸಬೇಕು. ವಾಹನಗಳಿಗೆ ಕ್ಷಮತಾ ಪ್ರಮಾಣಪತ್ರ (ಎಫ್ಸಿ) ನೀಡುವ ಆವರಣದಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಅವಳಿನಗರ ಆಟೊ ಚಾಲಕರಿಗೆ ಚಾಲನ ಪರವಾನಗಿ ಪತ್ರವನ್ನು ಸರ್ಕಾರಿ ಶುಲ್ಕದಲ್ಲಿಯೇ ನೀಡಬೇಕು. ಬೇರೆ ತಾಲ್ಲೂಕಿನ ಆಟೊಗಳು ಅವಳಿನಗರದಲ್ಲಿ ಸಂಚರಿಸುತ್ತಿದ್ದು, ತಪಾಸಣೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಆಗ್ರಹಿಸಿದರು.

ಜೀವನ ಹುತ್ಕುರಿ, ಲಕ್ಷ್ಮಣ ಜಮನಾಳ, ದಾವಲಸಾಬ ಕುರಹಟ್ಟಿ, ಮುರಳಿ ಇಂಗಳ್ಳಿ, ಪ್ರಕಾಶ ಗಡಾದ, ಸುರೇಶ ರಾಥೋಡ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-24-2103867628

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.