ಹುಬ್ಬಳ್ಳಿ: ನಗರದ ದಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಹುಬ್ಬಳ್ಳಿ ಘಟಕದಿಂದ ಬುದ್ಧ ಪೂರ್ಣಿಮೆ ಆಚರಣೆ ಕಾರ್ಯಕ್ರಮವನ್ನು ಶುಕ್ರವಾರ ಏರ್ಪಡಿಸಲಾಗಿದೆ ಎಂದು ಘಟಕದ ಅಧ್ಯಕ್ಷ ನಿಂಗಪ್ಪ ಸಿಂದಗಿ ತಿಳಿಸಿದ್ದಾರೆ.

ರೈಲ್ವೆ ಎಂಪ್ಲಾಯೀಸ್ ಬುದ್ಧವಿಹಾರದಲ್ಲಿ ಬೆಳಿಗ್ಗೆ 8.30ರಿಂದ 9.30ರವರೆಗೂ ಬೌದ್ಧ ಉಪಾಸನೆ ಮತ್ತು ಧಮ್ಮ ಧ್ವಜಾರೋಹಣ, ಸಂಜೆ 6 ಗಂಟೆಗೆ ಸಾಯಿ ಮಂದಿರದಿಂದ ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಧಮ್ಮ ದೀಪ ಮೆರವಣಿಗೆ ನಡೆಯಲಿದೆ. ನಂತರ ರೈಲ್ವೆ ಎಂಪ್ಲಾಯೀಸ್ ಬುದ್ಧವಿಹಾರದಲ್ಲಿ ದೀಪ ಬೆಳಗಿಸುವ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದ್ದಾರೆ. ಎಲ್ಲ ಬೌದ್ಧ ಉಪಾಸಕರು, ಉಪಾಸಕಿಯರು ಹಾಗೂ ಅಂಬೇಡ್ಕರ್ ಅನುಯಾಯಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-24-266391828

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.