ಹುಬ್ಬಳ್ಳಿ: ಇಲ್ಲಿನ ಸಂತೋಷ ನಗರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ಯುವ ಪ್ರತಿಭೆ ಜೆ.ಪೂರ್ವಿ ನಿರಂಜನ ಹಾಗೂ ತಂಡದವರು ದಾಸವಾಣಿ ಕಾರ್ಯಕ್ರಮ ನಡೆಸಿಕೊಟ್ಟರು.

ಗ್ವಾಲಿಯರ್ ಕಿರಾಣಾ ಘರಾಣದಲ್ಲಿ ರಾಗ ಶುದ್ಧ ಕಲ್ಯಾಣ, ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿ ಸಂಗೀತ ರಸಿಕರ ಮನ ತಣಿಸಿದರು. ಮನುಕುಮಾರ ಹಿರೇಮಠ, ರಾಘವೇಂದ್ರ ನಾಕೋಡ್ ತಬಲಾ, ವಿಜಯಕುಮಾರ ಅರ್ಕಸಾಲಿ ಹಾರ್ಮೋನಿಯಂ, ಸುಮೇಧ ವಿಠ್ಠಲ ಹಾಗೂ ಮೌನೇಶ ಬಡಿಗೇರ ತಾಳದಲ್ಲಿ ಸಹಕರಿಸಿದರು.

ಹರಿದಾಸ ಚಿಂತಕ ವಿಷ್ಣುತೀರ್ಥ ಕಲ್ಲೂರಕರ, ಪಂಡಿತ ಬಾಲಚಂದ್ರ ನಾಕೋಡ, ಮಠದ ಧರ್ಮದರ್ಶಿ ಗೋವಿಂದಾಚಾರ್ಯ ಪಾಟೀಲ ಮಾತನಾಡಿದರು.

ಗಾಯಕ ಜೆ.ನಿರಂಜನ್, ರವಿ ಪಾಟೀಲ, ಶ್ರೀನಿವಾಸ ರಾವ್, ವೇದವ್ಯಾಸ ಬಂಡಿಹಾಳ್, ವಾದಿರಾಜ್ ಜೋಶಿ, ವಿದುಷಿ ಪ್ರತಿಮಾ ಜೋಶಿ, ಗೋಪಾಲ ಆಚಾರ್ಯ ಕಟ್ಟಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-24-2106375938

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.