ಹುಬ್ಬಳ್ಳಿ: ಸೂರತ್ ಮಹಾನಗರ ಪಾಲಿಕೆಯಿಂದ ನಿರ್ವಹಿಸಲಾಗುತ್ತಿರುವ, ಎನ್ವಿರೊ ಕಂಟ್ರೋಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ಸ್ಥಾಪಿಸಲಾದ ದೇಶದ ಅತಿ ದೊಡ್ಡ 140 ಎಂಎಲ್ಡಿ ಸಾಮರ್ಥ್ಯದ ಕೊಳಚೆ ನೀರು ಸಂಸ್ಕರಣಾ ಘಟಕಕ್ಕೆ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ನಿಯೋಗ ಶನಿವಾರ ಭೇಟಿ ನೀಡಿತು.

‘ಸೂರತ್ ನಗರದಲ್ಲಿ ತ್ಯಾಜ್ಯ ನೀರನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಶುದ್ಧೀಕರಿಸಿ, ಕೈಗಾರಿಕೆಗಳು ಹಾಗೂ ವಿವಿಧ ವಾಣಿಜ್ಯ ಘಟಕಗಳಿಗೆ ನಿಗದಿತ ದರದಲ್ಲಿ ಪೂರೈಕೆ ಮಾಡುವ ಮೂಲಕ ನೀರಿನ ಮರುಬಳಕೆ ಮಾಡಲಾಗುತ್ತಿದೆ. ಇದರಿಂದ ಪ್ರತಿ ವರ್ಷ ₹60 ಕೋಟಿಗೂ ಅಧಿಕ ಆದಾಯ ಪಡೆಯಲಾಗುತ್ತಿದೆ’ ಎಂದು ತಾಂತ್ರಿಕ ತಜ್ಞರು ತಿಳಿಸಿದರು.

ವಿವರಗಳನ್ನು ಸೂರತ್ ಮಹಾನಗರಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಪರೇಶ್ ಪಟೇಲ್ ವಿವರಿಸಿದರು.

‘ಅವಳಿ ನಗರದಲ್ಲಿಯೂ ಇದೇ ಮಾದರಿಯ ಯೋಜನೆ ಜಾರಿಗೊಳಿಸಿದರೆ ಪಾಲಿಕೆಗೆ ಹೆಚ್ಚಿನ ಆದಾಯ ಬರಲಿದೆ. ಒಳಚರಂಡಿ ಮತ್ತು ತ್ಯಾಜ್ಯ ನೀರನ್ನು ಸಮರ್ಪಕವಾಗಿ ಶುದ್ಧೀಕರಿಸಿ ಸುತ್ತಮುತ್ತಲಿನ ಕೈಗಾರಿಕೆ ಹಾಗೂ ರೈತರಿಗೆ ಪೂರೈಕೆ ಮಾಡಬಹುದು’ ಎಂದು ನಿಯೋಗದ ಸದಸ್ಯರು ಅಭಿಪ್ರಾಯಪಟ್ಟರು. ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ್ ಚವ್ಹಾಣ್, ಸಭಾನಾಯಕ ಈರೇಶ ಅಂಚಟಗೇರಿ, ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ್, ಉಪ ಆಯುಕ್ತ (ಅಭಿವೃದ್ಧಿ) ವಿಜಯಕುಮಾರ ನಿಯೋಗದಲ್ಲಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-24-1539342702

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.