ಹುಬ್ಬಳ್ಳಿ: ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ನಗರದ ರಸ್ತೆ ಬದಿ, ರಸ್ತೆ ವಿಭಜಕದಲ್ಲಿನ ಗಿಡಗಳು ನೀರಿಲ್ಲದೆ ಒಣಗುತ್ತಿವೆ. ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಪ್ರಸ್ತುತ ಗರಿಷ್ಠ 37ರಿಂದ 38 ಡಿಗ್ರಿ ತಾಪಮಾನವಿದೆ. ನಗರದ ವಿವಿಧೆಡೆ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಹಾಗೂ ವಾಹನಗಳ ದಟ್ಟಣೆ ಸಹ ತಾಪಮಾನ ಹೆಚ್ಚಳಕ್ಕೆ ಕಾರಣವೂ ಆಗಿದೆ.

ಬಿಸಿಲಿನಿಂದ ಇಲ್ಲಿನ ವಿದ್ಯಾನಗರದ ಶಿರೂರು ಪಾರ್ಕ್ ರಸ್ತೆಯಿಂದ ತೋಳನಕೆರೆಯ ವೃತ್ತದ ತನಕ ಹಾಗೂ ಗೋಕುಲ ರಸ್ತೆಯಿಂದ ವಿಮಾನ ನಿಲ್ದಾಣದ ಮಾರ್ಗದ ರಸ್ತೆ ವಿಭಜಕದಲ್ಲಿನ ಗಿಡಗಳು ನೀರಿಲ್ಲದೇ ಒಣಗುತ್ತಿವೆ.

‘ಬೇಸಿಗೆ ಅವಧಿಯಲ್ಲಿ ನಗರದ ರಸ್ತೆ ವಿಭಜಕದಲ್ಲಿನ ಗಿಡಗಳಿಗೆ ಟ್ಯಾಂಕರ್ ಮೂಲಕ ನೀರುಣಿಸುವುದು ನಗರದ ಹಸಿರೀಕರಣದ ಪ್ರಮುಖ ಕಾರ್ಯ. ಇದು ಪಾಲಿಕೆಯ ಹೊಣೆಗಾರಿಕೆಯೂ ಹೌದು. ಆದರೆ, ಪಾಲಿಕೆಯವರು ಗಿಡಗಳಿಗೆ ಸಕಾಲಕ್ಕೆ ನೀರುಣಿಸದ ಕಾರಣ ಅವು ಒಣಗುತ್ತಿವೆ’ ಎಂದು ಶಿರೂರು ಪಾರ್ಕ್ನ ಪಾದಚಾರಿಗಳು ಹಾಗೂ ವಾಹನ ಸವಾರರು ದೂರುತ್ತಾರೆ.

‘ಶಿರೂರು ಪಾರ್ಕ್ ರಸ್ತೆ ಹಾಗೂ ಗೋಕುಲ ರಸ್ತೆಯ ವಿಭಜಕದಲ್ಲಿ ಹೂವು ಬಿಡುವ ಕಣಗಿಲೆ ಗಿಡ ಸೇರಿ ಇತರೆ ಸಸಿಗಳನ್ನು ನೆಡಲಾಗಿದೆ. ಇವುಗಳ ಫೋಷಣೆಯಿಂದ ವಾಯುಮಾಲಿನ್ಯ ಅಲ್ಪಮಟ್ಟಿಗೆ ಕಡಿಮೆಯಾಗುತ್ತದೆ. ರಸ್ತೆ ಸೌಂದರ್ಯವೂ ಹೆಚ್ಚುತ್ತದೆ. ಆದರೆ, ಈ ಸಸಿಗಳ ಪೋಷಣೆಯೇ ಸರಿಯಾಗಿ ಆಗುತ್ತಿಲ್ಲ’ ಎಂದು ಶಿರೂರು ಪಾರ್ಕ್ ನಿವಾಸಿ ವೈದ್ಯ ಡಾ.ವಿವೇಕ್ ಆರೋಪಿಸುತ್ತಾರೆ.

‘ನಗರದಲ್ಲಿ ಈಚೆಗೆ ಸುರಿದ ಮಳೆಯಿಂದ ಭೂಮಿಯಲ್ಲಿ ಅಲ್ಪಮಟ್ಟಿಗೆ ತೇವಾಂಶವಿದೆ. ಆದರೆ, ಅತಿಯಾದ ಬಿಸಿಲಿನಿಂದ ಈ ತೇವಾಂಶ ರಸ್ತೆ ವಿಭಜಕದಲ್ಲಿನ ಸಸಿಗಳ ಬೆಳವಣಿಗೆಗೆ ಸಾಲುವುದಿಲ್ಲ. ಪಾಲಿಕೆಯವರು ವಾರಕ್ಕೆ ಮೂರು ಬಾರಿಯಾದರೂ ಈ ಗಿಡಗಳಿಗೆ ನೀರುಣಿಸಿದರೆ, ಅವುಗಳ ಬೆಳೆವಣಿಗೆಯಾಗುತ್ತವೆ’ ಎನ್ನುತ್ತಾರೆ ಶಿರೂರು ಪಾರ್ಕ್ ರಸ್ತೆಯ ಅಂಗಡಿಯೊಂದರ ಮಾಲೀಕ ಕೃಷ್ಣಮೂರ್ತಿ.

‘ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಕಾರ್ಯ ಚಟುವಟಿಕೆ ಅಡಿಯಲ್ಲಿ ಗೋಕುಲ ರಸ್ತೆಯ ಇನ್ರ್ಬಿಟ್ ಮಾಲ್ನಿಂದ ವಿಮಾನ ನಿಲ್ದಾಣದ ತನಕ ರಸ್ತೆ ವಿಭಜಕದಲ್ಲಿನ ಗಿಡಗಳಿಗೆ ನಾವು ನೀರುಣಿಸಿ, ಪೋಷಿಸುತ್ತಿದ್ದೇವೆ. ಕಳೆದ ಅಕ್ಟೋಬರ್ನಿಂದಲೂ ಈ ಕಾರ್ಯ ನಡೆಯುತ್ತಿದೆ’ ಎಂದು ಇನ್ರ್ಬಿಟ್ ಮಾಲ್ನ ಗಿರೀಶ ಕುಮಾರ್ ಹೇಳುತ್ತಾರೆ.

‘ವಿದ್ಯಾನಗರದ ಶಿರೂರು ಪಾರ್ಕ್ ರಸ್ತೆಯಿಂದ ತೋಳನಕೆರೆ ವೃತ್ತದ ತನಕ ಇರುವ ರಸ್ತೆ ವಿಭಜಕದಲ್ಲಿ ಗಿಡಗಳಿಗೆ ವಾರದಲ್ಲಿ ಮೂರು ದಿನ ಪಾಲಿಕೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಕೆಲವೊಮ್ಮೆ ಟ್ರ್ಯಾಕ್ಟರ್ ಚಾಲಕ ಬರಲ್ಲ. ನಮಗೆ ಕಾಯಂ ಸಿಬ್ಬಂದಿಯೂ ಇಲ್ಲ. ಇದರಿಂದಾಗಿ ಸಕಾಲಕ್ಕೆ ಗಿಡಗಳಿಗೆ ನೀರು ಹಾಕಲು ಆಗುತ್ತಿಲ್ಲ. ಆದರೂ ಗಿಡಗಳು ಒಣಗಲು ಬಿಡದಂತೆ ನೋಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಪಾಲಿಕೆ ವಲಯ 5ರ ತೋಟಗಾರಿಕೆ ವಿಭಾಗದ ಅಧಿಕಾರಿಯೊಬ್ಬರು.

ನಗರದಲ್ಲಿ ಈಚೆಗೆ ಸುರಿದ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶವಿತ್ತು. ಇದರಿಂದಾಗಿ ಕೆಲ ದಿನಗಳಿಂದ ಗಿಡಗಳಿಗೆ ನೀರು ಪೂರೈಸಿರಲಿಲ್ಲ. ಈಗ ಮತ್ತೆ ಆರಂಭಿಸಿದ್ದೇವೆ
– ಫಿರೋಜ್, ಎಂಜಿನಿಯರ್, ಧಾರವಾಡ ಪಾಲಿಕೆಯ ತೋಟಗಾರಿಕೆ ವಿಭಾಗ

ಸಿಬ್ಬಂದಿ ಕೊರತೆ: ನೀರುಣಿಸಲು ವಿಳಂಬ

‘ಹೊಸೂರು ರಸ್ತೆ, ಗೋಕುಲ ರಸ್ತೆ ಹಾಗೂ ಅಕ್ಷಯ ಪಾರ್ಕ್ ರಸ್ತೆಯಿಂದ ವಿಮಾನ ನಿಲ್ದಾಣದ ವರೆಗಿನ ರಸ್ತೆ ವಿಭಜಕದಲ್ಲಿನ ಗಿಡಗಳಿಗೆ ವಾರದಲ್ಲಿ ಎರಡು ಬಾರಿ ಪಾಲಿಕೆಯ ಟ್ಯಾಂಕರ್ ಮೂಲಕ ನೀರು ಬಿಡಲಾಗುತ್ತಿದೆ. ಕೆಲವೊಮ್ಮೆ ಸಿಬ್ಬಂದಿ ಕೊರತೆ ಹಾಗೂ ಸಕಾಲಕ್ಕೆ ಟ್ಯಾಂಕರ್ ವಾಹನ ಸಿಗದ ಕಾರಣ ನೀರು ಪೂರೈಸಲು ವಿಳಂಬವಾಗುತ್ತಿದೆ’ ಎನ್ನುತ್ತಾರೆ ಪಾಲಿಕೆಯ ಪರಿಸರ ವಿಭಾಗದ ಅಧಿಕಾರಿಯೊಬ್ಬರು.

‘ಈ ಮಾರ್ಗದಲ್ಲಿನ ಗಿಡಗಳಿಗೆ ಪ್ರತಿ ಬಾರಿ ಇಬ್ಬರು ಸಿಬ್ಬಂದಿ ಟ್ಯಾಂಕರ್ ಮೂಲಕ ಕನಿಷ್ಠ 10 ಸಾವಿರ ಲೀಟರ್ ನೀರು ಪೂರೈಸುತ್ತಾರೆ. ಬೇಸಿಗೆ ಅವಧಿಯಲ್ಲಿ ರಸ್ತೆ ವಿಭಜಕ ಹಾಗೂ ರಸ್ತೆ ಬದಿಯಲ್ಲಿನ ಗಿಡ–ಮರಗಳಿಗೆ ನೀರುಣಿಸುವುದು ಸಾರ್ವಜನಿಕರ ಹೊಣೆಗಾರಿಕೆಯೂ ಇದೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.